Recent Posts

Sunday, January 19, 2025
ಸುದ್ದಿ

ಭಜರಂಗಿಗಳಿಗೆ ಬೈದ ಕಾಂಗ್ರೆಸ್ ನಾಯಕಿ ಮೈಮೇಲೆ ಕೈಹಾಕಿದ ಕಾಂಗ್ರೆಸ್ ನ ಮುಸ್ಲಿಂ ನಾಯಕ..! ‘ಕೈ’ಹಾಕಿದ ಮುಸ್ಲಿಂ ನಾಯಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರತಿಭಾ ಕುಳಾಯಿ?

Prathibha Kulai

ಮಂಗಳೂರು: ಶಾಸಕರ ನಿವಾಸದಲ್ಲಿ ಸಾರ್ವಜನಿಕವಾಗಿ ರಸಿಕತನ ತೋರಿದ ಕಾಂಗ್ರೆಸ್‌ ಮುಖಂಡನೊಬ್ಬನಿಗೆ ಮಹಿಳಾ ಕಾರ್ಪೋರೇಟರ್‌ ಹಿಗ್ಗಾಮುಗ್ಗಾ ಥಳಿಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. 

ಮಂಗಳೂರು ಉತ್ತರ ಶಾಸಕ ಮೊಯಿದ್ದೀನ್‌ ಬಾವಾ ಅವರ ನಿವಾಸದಲ್ಲಿ ಸೋಮವಾರ ಸಂಜೆ ಘಟನೆ ನಡೆದಿರುವುದಾಗಿ ವರದಿಯಾಗಿದ್ದು , ಕಾಂಗ್ರೆಸ್‌ ಕಾರ್ಯದರ್ಶಿ ಅಬ್ದುಲ್‌ ಸತ್ತಾರ್‌ ಎಂಬಾತ ಕಾರ್ಪೋರೇಟರ್‌ ಕೈ ಹಿಡಿದು ಥಳಿತಕ್ಕೊಳಗಾಗಿದ್ದಾನೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
Prathibha Kulai

ಪ್ರತಿಭಾ ಅವರು ಕೈ ಹಿಡಿದ ಕೂಡಲೇ ಕೆಂಡಮಂಡಲವಾಗಿದ್ದಾರೆ ಎನ್ನಲಾಗಿದ್ದು , ಸತ್ತಾರ್‌ಗೆ ಅಟ್ಟಾಡಿಸಿಕೊಂಡು ಮನೆಯಿಂದ ಹೊರಗೆಳೆದು ಥಳಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಸ್ಲೀಮರನ್ನು ಹೊಗಳಿ , ಹಿಂದೂಪರ ಸಂಘಟನೆಗಳನ್ನು ಧೂಷಿಸಿದ್ದ ಪ್ರತಿಭಾ..!

https://youtu.be/xlmbGa11RgM

ಇದೇ ಕೆಲ ದಿನಗಳ ಹಿಂದೆ ತಾನೂ ಓರ್ವ ಹಿಂದೂ ಎಂಬೂದನ್ನು ಮರೆತು , ಹಿಂದೂಪರ ಸಂಘಟನೆಗಳನ್ನು ಧೂಷಿಸಿದ್ದ ಪ್ರತಿಭಾ ಕುಳಾಯಿ ಬಜರಂಗದಳದಂತಹ ಸಂಘಟನೆಗಳ ಕಾರ್ಯಕರ್ತರು ಸಾವಿಗಾಗಿಯೇ ಈ ಸಂಘಟನೆ ಸೇರುತ್ತಾರೆ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು. ಮುಸ್ಲೀಮರು ನಮ್ಮದೇ ದೇಶದ ಜನರು, ಅವರೂ ನಮ್ಮಂತೆಯೇ ಒಳ್ಳೆಯವರು ಎಂದು ಕೇವಲ ಕಾಂಗ್ರೆಸ್ ನ ರಾಜಕೀಯ ಲಾಭಕ್ಕಾಗಿ ಮಾತನಾಡಿದ್ದ ಪ್ರತಿಭಾ ಕುಳಾಯಿ ಗೆ ಇದೀಗ ತಮ್ಮದೇ ಪಕ್ಷದ ಮುಸ್ಲಿಂ ನಾಯಕನಿಂದ ಈ ರೀತಿಯ ಕಿರುಕುಳ ಉಂಟಾಗಿದ್ದು , ಇದೀಗ ತಮ್ಮದೇ ಪಕ್ಷದ ಈ ಮುಸ್ಲಿಂ ನಾಯಕನಿಗೆ ಮುಸ್ಲಿಂ ಶಾಸಕನ ಎದುರೇ ಬಾರಿಸಿದ್ದಾರೆ.!

Prathibha Kulai

ಹಿಂದೂ ಸಂಘಟನೆಗಳಿಂದ ಏಟು ತಿಂದಿದ್ದ ಮುಸ್ಲಿಂ ನಾಯಕ..!

ಕಾಂಗ್ರೆಸ್ ಸದಾ ಹಿಂದೂಪರ ಸಂಘಟನೆಗಳನ್ನು ವಿರೋಧಿಸುತ್ತಲೇ ಬಂದಿದೆ, ಆದರೂ ತಮ್ಮ ಧರ್ಮ ಕಾರ್ಯ ನಿಲ್ಲಿಸದ ಸಂಘಟನೆಗಳು ತಮ್ಮ ಧರ್ಮದ ವಿರುದ್ಧ ಎಂತಹ ಘಟನೆಗಳು ನಡೆದರೂ ವಿರೋಧಿಸುತ್ತವೆ. ಇದೇ ಕಾರಣಕ್ಕಾಗಿ ಈ ಹಿಂದೆಯೂ ಧರ್ಮದೇಟು ತಿಂದಿದ್ದ ಅಬ್ದುಲ್ ಸತ್ತಾರ್ , ಹಿಂದೂ ಹೆಣ್ಣುಮಕ್ಕಳ ವಿಚಾರದಲ್ಲಿ ಅಸಭ್ಯವಾಗಿ ವರ್ತಿಸಿದ್ದ. ಸಾರ್ವಜನಿಕವಾಗಿಯೇ ಏಟು ತಿಂದಿದ್ದ ಈತನಿಗೆ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸ್ಥಾನ ನೀಡಿ ಗೌರವಿಸಿತ್ತು. ಇದೀಗ ಕಾಂಗ್ರೆಸ್ ನಾಯಕರಿಗೇ ಈತನ ಅಸಲಿ ಮುಖ ಪ್ರದರ್ಶನವಾಗಿದ್ದು ಮುಂದಿನ ಕ್ರಮ ಏನೆಂಬುದನ್ನು ಕಾದು ನೋಡಬೇಕಾಗಿದೆ.!

ಕಾಂಗ್ರೆಸ್ ಗೆ ತನ್ನದೇ ಪಕ್ಷದ ನಾಯಕರನ್ನು ಹತೋಟಿಯಲ್ಲಿಡಲು ಸಾಧ್ಯವಾಗಲಿಲ್ಲ, ಇನ್ನು ದೇಶದ ಜನತೆಯನ್ನು ಯಾವ ರೀತಿಯಲ್ಲಿ ನೋಡಿಕೊಳ್ಳುತ್ತದೆ ಎಂಬೂದೇ ಜನತೆಯ ಮುಂದಿರುವ ಪ್ರಶ್ನೆ..?