Wednesday, January 22, 2025
ರಾಜಕೀಯರಾಷ್ಟ್ರೀಯಸಿನಿಮಾ

ಜೆಎನ್‌ಯುಗೆ ಹೋದ ದೀಪಿಕಾಗೆ ಪಾಕ್‌ನಿಂದ ₹5 ಕೋಟಿ! ‘ರಾ’ ಅಧಿಕಾರಿ ಹೇಳಿದ್ದೇನು? – ಕಹಳೆ ನ್ಯೂಸ್

ನವದೆಹಲಿ: ಕಳೆದ ಜನವರಿ ತಿಂಗಳಿನಲ್ಲಿ ದೆಹಲಿ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿನ (ಜೆಎನ್‌ಯು) ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣದ ವೇಳೆ ದೇಶದ ಬಹುತೇಕ ಜನರು ವಿದ್ಯಾರ್ಥಿಗಳ ವಿರುದ್ಧವಾಗಿ ನಿಂತಿದ್ದರೆ, ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರ ಪರವಾಗಿ ಬಂದು ಹೊಸದೊಂದು ವಿವಾದಕ್ಕೆ ಗ್ರಾಸರಾಗಿದ್ದರು.

ಪ್ರತಿ ವರ್ಷವೂ ಸರ್ಕಾರದಿಂದ 500 ಕೋಟಿಗೂ ಅಧಿಕ ಅನುದಾನ ಪಡೆಯುತ್ತಿರುವ ಈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಮಾಮೂಲು ಎನ್ನುವಂಥ ಈ ಪ್ರತಿಭಟನೆಗೆ ದೀಪಿಕಾ ಏಕೆ ಹೋಗಬೇಕಿತ್ತು ಎಂದು ಅನೇಕ ಮಂದಿ ಅವರ ವಿರುದ್ಧವಾಗಿ ನಿಂತಿದ್ದರೆ, ಕೆಲವರು ಅವರು ಹೋಗಿದ್ದು ಸರಿಯಾಗಿದೆ ಎಂದು ಬೆನ್ನುತಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆ ಪರ-ವಿರೋಧವೀಗ ಕರೊನಾ ವೈರಸ್‌ ಹಿನ್ನೆಲೆಯಲ್ಲಿ ತಣ್ಣಗಾಗಿದ್ದರೂ, ದಿಢೀರ್‌ ಈಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೀಪಿಕಾ ಪಡುಕೋಣೆ ವಿರುದ್ಧ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಅದೇನೆಂದರೆ, ಜೆಎನ್‌ಯುನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಇವರಿಗೆ 5 ಕೋಟಿ ರೂಪಾಯಿ ನೀಡಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ಈ ಹಣವನ್ನು ಪಾಕಿಸ್ತಾನದಿಂದ ನೀಡಲಾಗಿದೆ ಎಂಬ ಆರೋಪವನ್ನು ಇದೀಗ ಮಾಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಈ ಕುರಿತು ಮಾಜಿ ರೀಸರ್ಚ್‌ ಆಯಂಡ್‌ ಎನಾಲಿಸಿಸ್‌ ವಿಂಗ್‌ನ (ರಾ) ಅಧಿಕಾರಿ ಎನ್.ಕೆ.ಸೂದ್ ಅವರು ಮಾಹಿತಿ ನೀಡಿದ್ದು, ಪಾಕಿಸ್ತಾನ ಸಂಬಂಧ ಹೊಂದಿರುವ ವ್ಯಕ್ತಿಯಿಂದ ದೀಪಿಕಾಗೆ ಐದು ಕೋಟಿ ರೂಪಾಯಿ ಹಣ ಬಂದಿರುವುದಾಗಿ ಹೇಳಿದ್ದಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ಹೇಳಲಾಗುವ ಪ್ರಮುಖ ಉದ್ಯಮಿ ಅನೀಲ್ ಮುಸರತ್ ಅವರಿಂದ 5 ಕೋಟಿ ರೂಪಾಯಿ ಪಡೆದಿರುವ ಬಗ್ಗೆ ಅವರು ವಿವರಣೆ ನೀಡಿದ್ದಾರೆ.

ಈ ಬಗ್ಗೆ ಇದಾಗಲೇ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯನ್ನು ಪ್ರಾರಂಭಿಸಿರುವುದಾಗಿಯೂ ಸೂದ್‌ ಹೇಳಿದ್ದಾರೆ. ಬಾಲಿವುಡ್‌ ಹಾಗೂ ಪಾಕಿಸ್ತಾನದ ಐಎಸ್‌ಐ ಮತ್ತು ಭೂಗತ ಜಗತ್ತಿಗೆ ಲಿಂಕ್‌ ಇರುವ ಬಗ್ಗೆ ಭಾರಿ ಚರ್ಚೆ ಶುರುವಾಗಿರುವ ಈ ದಿನಗಳಲ್ಲಿ ಇಂಥದ್ದೊಂದು ಮಾಹಿತಿ ಬೆಳಕಿಗೆ ಬಂದಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಲಿದೆ. ಸತ್ಯಾಸತ್ಯತೆ ಶೀಘ್ರ ಹೊರಬೀಳಲಿದೆ ಎಂದಿದ್ದಾರೆ.

ಬಾಲಿವುಡ್‌ ಜತೆ ಲಿಂಕ್‌ ಇರುವ ಕುರಿತು ತನಿಖೆಗೆ ರಾಷ್ಟ್ರೀಯ ತನಿಖಾ ಆಯೋಗವು ತನಿಖೆಗಾಗಿ ಶೀಘ್ರದಲ್ಲಿ ಮಹಾರಾಷ್ಟ್ರ ಸರ್ಕಾರದ ಚರ್ಚಿಸಲಿದೆ ಎನ್ನಲಾಗಿದೆ. (ಏಜೆನ್ಸೀಸ್‌)