Recent Posts

Friday, November 22, 2024
ಸುದ್ದಿ

ಲಾಕ್​ಡೌನ್​ ಅವಧಿಯಲ್ಲಿ ಸೆಕ್ಸ್​ ಟಾಯ್ಸ್​ ಖರೀದಿಸಿದವರಲ್ಲಿ ಕರ್ನಾಟಕದ ಜನತೆ ಎರಡನೇ ಸ್ಥಾನ-ಕಹಳೆ ನ್ಯೂಸ್

ನವದೆಹಲಿ: ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರ ಮನೆ ಸೇರಿಕೊಂಡಿದ್ದರೆ, ಒಂದು ಉದ್ಯಮ ಮಾತ್ರ ಬಿರುಸಿನ ವ್ಯಾಪಾರ ವಹಿವಾಟು ನಡೆಸಿತು. ಅದುವೇ ಸೆಕ್ಸ್​ ಟಾಯ್ಸ್​ (ಲೈಂಗಿಕ ಬೊಂಬೆಗಳು) ತಯಾರಿಸಿ, ಮಾರಾಟ ಮಾಡುವ ಉದ್ಯಮವಾಗಿತ್ತು ಎಂಬುದು ಸತ್ಯದ ಮಾತು. ನೂರಕ್ಕೆ ನೂರು ಆನ್​ಲೈನ್​ನಲ್ಲಿ ನಡೆದ ಈ ವಹಿವಾಟಿನಲ್ಲಿ ಸೆಕ್ಸ್​ ಟಾಯ್ಸ್​ ಖರೀದಿಸಿದವರಲ್ಲಿ ಕರ್ನಾಟಕದ ಜನತೆ ಎರಡನೇ ಸ್ಥಾನದಲ್ಲಿದ್ದಾರೆ ಎಂಬುದು ಮತ್ತೂ ಅಚ್ಚರಿಯ ಸಂಗತಿಯಾಗಿದೆ.

ಸೆಕ್ಸ್​ ಟಾಯ್ಸ್​ ಖರೀದಿದಾರರಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನ ತಮಿಳುನಾಡಿನದ್ದಾಗಿದೆ. ಈ ಮೂರು ರಾಜ್ಯಗಳಲ್ಲಿ ಲೈಂಗಿಕ ವಿಷಯದಲ್ಲಿ ತುಂಬಾ ಮಡಿವಂತಿಕೆ ಮತ್ತು ಮುಚ್ಚುಮರೆ ಅನುಸರಿಸಲಾಗುತ್ತದೆ. ಇಂಥದ್ದರಲ್ಲಿ ಈ ರಾಜ್ಯಗಳಿಂದ ಸೆಕ್ಸ್​ ಟಾಯ್ಸ್​ಗೆ ಬೇಡಿಕೆ ಬರುವುದು ಎಂದರೆ ಅಚ್ಚರಿಯ ಸಂಗತಿ. ಆದರೆ ಬದಲಾಗುತ್ತಿರುವ ಟ್ರಂಡ್​ ಅನ್ನು ಗಮನಿಸಿದಾಗ ಇದು ಅಚ್ಚರಿಪಡುವ ಸಂಗತಿಯೇ ಅಲ್ಲ ಎನಿಸದಿರದು.

ಜಾಹೀರಾತು
ಜಾಹೀರಾತು
ಜಾಹೀರಾತು

ಆನ್​ಲೈನ್​ನಲ್ಲಿ ಸೆಕ್ಸ್​ ಟಾಯ್ಸ್​ ಅನ್ನು ಮಾರಾಟ ಮಾಡುವ ThatsPersonal.com ವೆಬ್​ಸೈಟ್​ನ ಪ್ರಕಾರ ಲಾಕ್​ಡೌನ್​ ಅವಧಿಯಲ್ಲಿ ಸೆಕ್ಸ್​ ಟಾಯ್ಸ್​ಗಳ ಬೇಡಿಕೆ ಶೇ.65 ಹೆಚ್ಚಳವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಸೆಕ್ಸ್​ ಟಾಯ್ಸ್​ ಖರೀದಿ ವಿಷಯದಲ್ಲಿ ಹೆಚ್ಚಿನ ವಿವರಗಳನ್ನು ಒದಗಿಸಿರುವ ವೆಬ್​ಸೈಟ್​, ಅತಿಹೆಚ್ಚು ಬೇಡಿಕೆಯ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಸೆಕ್ಸ್​ ಟಾಯ್ಸ್​ ಗರಿಷ್ಠ ಪ್ರಮಾಣದಲ್ಲಿ ಖರೀದಿಯಾಗಿವೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದ ಪೈಕಿ ಅತಿಹೆಚ್ಚು ಸೆಕ್ಸ್​ ಟಾಯ್ಸ್​ ಖರೀದಿಸಿದ ಹೆಗ್ಗಳಿಗೆ ಬೆಂಗಳೂರು ನಗರದ್ದಾಗಿದೆ. ರಾಷ್ಟ್ರರಾಜಧಾನಿ ದೆಹಲಿ ನಗರಕ್ಕೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ದೊರೆತಿದೆ.

 

ಭಾರತದಲ್ಲಿ ಇಂದಿಗೂ ಕೂಡ ಸೆಕ್ಸ್​ ವಿಷಯದಲ್ಲಿ ತುಂಬಾ ಮಡಿವಂತಿಕೆ ಮತ್ತು ಮುಚ್ಚುಮರೆ ಮಾಡಲಾಗುತ್ತದೆ. ಆದರೆ, ThatsPersonal.com ವೆಬ್​ಸೈಟ್​ನ ಅಂಕಿ ಅಂಶಗಳನ್ನು ಗಮನಿಸಿದಾಗ 25ರಿಂದ 34 ವರ್ಷದವರು ಗರಿಷ್ಠ ಸಂಖ್ಯೆಯಲ್ಲಿ ಸೆಕ್ಸ್​ ಟಾಯ್ಸ್​ ಅನ್ನು ಖರೀದಿಸಿದ್ದಾರೆ. ಅಂದರೆ, ಹೊಸ ತಲೆಮಾರಿನ ಯುವಜನರು ಸೆಕ್ಸ್​ ವಿಷಯದಲ್ಲಿ ಮುಕ್ತತೆ ಕಾಯ್ದುಕೊಳ್ಳಲು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸೆಕ್ಸ್​ ವಿಚಾರದಲ್ಲಿ ಇವರು ಮಡಿವಂತಿಕೆಯನ್ನಾಗಲಿ ಅಥವಾ ಮುಚ್ಚುಮರೆಯನ್ನಾಗಲಿ ಮಾಡುವುದಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ ಎನ್ನಲಾಗಿದೆ.

 

ಇದಕ್ಕೂ ಮುಖ್ಯವಾಗಿ, ಕೋವಿಡ್​-19 ಪಿಡುಗು ಜನರ ಜೀವನದ ಪಾಲಿಗೆ ಮಾರಕವಾಗಿ ಪರಿಣಮಿಸಿದ್ದರೂ ಲೈಂಗಿಕ ಚಟುವಟಿಕೆ ವಿಷಯದಲ್ಲಿ ಏನೊಂದು ಅಡ್ಡಿಯನ್ನುಂಟು ಮಾಡಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.