Sunday, January 19, 2025
ಪುತ್ತೂರುಸುದ್ದಿ

ಪುತ್ತೂರಿನಲ್ಲಿ ಸೋಂಕಿತ ಪಕ್ಕದ ಮನೆಯ ಆಂಟಿಗೆ ಕಿಸ್ ಕೊಟ್ಟ ಪೋಲಿ ಅಜ್ಜನಿಗೆ ಅಂಟಿದ ಕೊರೊನಾ ಸೋಂಕು – ಕಹಳೆ ನ್ಯೂಸ್

ಪುತ್ತೂರು: ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜನ ರಸಿಕತನ ಮಿತಿ ಮೀರಿ ಪಕ್ಕದ ಮನೆಯ ವಿವಾಹಿತ ಮಹಿಳೆಗೆ ಕಿಸ್ ಕೊಟ್ಟಿದ್ದರಿಂದ ಕೊರೊನಾ ಮೈಮೇಲೆ ಮೆತ್ತಿಕೊಂಡಿರುವ ಘಟನೆ ವರದಿಯಾಗಿದೆ.

ರಸಿಕ ಮನೋಭಾವದ ಈ ಮುದುಕ ಚಪಲ ಚೆನ್ನಿಗರಾಯನಾಗಿದ್ದು, ಈ ಹಿಂದೆ ಕೂಡಾ ಇವರ ವಿರುದ್ದ ಇದೇ ರೀತಿಯ ಆರೋಪಗಳೂ ಕೇಳಿ ಬಂದಿತ್ತು. ಮುದುಕನ ಉಪಟಳವನ್ನು ನಿಯಂತ್ರಣ ಮಾಡಬೇಕೆಂದು ಊರಿನ ಯುವಕರು ಅವರ ಮನೆಗೆ ದಾಳಿ ಮಾಡಿ
ಎಚ್ಚರವನ್ನೂ ಕೊಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಮುದುಕ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ, ಇತ್ತೀಚೆಗೆ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿರುವ ವಿವಾಹಿತ ಮಹಿಳೆಯ ಮನೆಗೆ ತೆರಳಿದ್ದ ಮುದುಕ ಅಲ್ಲಿನ ಮಹಿಳೆಗೆ ಕಿಸ್ ಕೊಟ್ಟಿದ್ದ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುದುಕನ ದುರದೃಷ್ಟ ಎಂಬಂತೆ ಮಹಿಳೆಗೆ ಈ ಹಿಂದೆಯೇ ಕೊರೊನಾ ಪಾಸಿಟಿವ್ ಆಗಿದ್ದು, ಮನೆಯಿಂದಲೇ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

ಮಹಿಳೆಗೆ ನೀಡಿರುವ ಮುತ್ತು ಮುದುಕನಿಗೆ ದುಬಾರಿಯಾಗಿ ಪರಿಣಮಿಸಿದ್ದು, ಅಜ್ಜನಿಗೂ ಕೊರೊನಾ ಬಂದಿದೆ . ಮುದುಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಚಾರ ಗ್ರಾಮದಲ್ಲಿ ಕುತೂಹಲವನ್ನು ಸೃಷ್ಟಿಸಿದ್ದು , ಪಡ್ಡೆ ಹುಡುಗರಿಗೆ ಮನರಂಜನೆಯಾಗಿದ್ದು , ಇನ್ನಾದರೂ ಅಜ್ಜನ ಕಿಸ್ ಪುರಾಣ ನಿಲ್ಲಲಿ ಎಂದು ಹಾರೈಸಿದ್ದಾರೆ .