Recent Posts

Friday, November 22, 2024
ಆರೋಗ್ಯರಾಜ್ಯರಾಷ್ಟ್ರೀಯಸುದ್ದಿ

ಅನ್ ಲಾಕ್ 3.0 : ಆ. 5ರಿಂದ ರಾತ್ರಿ ಕರ್ಫ್ಯೂ ತೆರವು ; ಜಿಮ್, ಯೋಗ ಕೇಂದ್ರಕ್ಕೆ ಅನುಮತಿ – ಕಹಳೆ ನ್ಯೂಸ್

ನವದೆಹಲಿ, ಜು 30 : ಕೊರೊನಾದ ಗಣನೀಯ ಏರಿಕೆಯ ನಡುವೆ ಕೇಂದ್ರ ಸರ್ಕಾರ ಬುಧವಾರ ಅನ್ ಲಾಕ್-3 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಆಗಸ್ಟ್ 5ರಿಂದ ರಾತ್ರಿ ಕರ್ಫ್ಯೂ ತೆರವುಗೊಳಿಸಿ ,ಜಿಮ್, ಯೋಗ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಈ ಮಾರ್ಗಸೂಚಿ ಪ್ರಕಾರ ಶಾಲಾ- ಕಾಲೇಜು , ಕೋಚಿಂಗ್ ಸೆಂಟರ್ ಗಳು, ಮೆಟ್ರೋ , ಸಿನಿಮಾ ಮಂದಿರಗಳನ್ನು ತೆರೆಯಲು ಆಗಸ್ಟ್ 31ರ ವರೆಗೆ ಅವಕಾಶ ನೀಡಿಲ್ಲ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಟೈನ್​ಮೆಂಟ್​ ಜೋನ್​ಗಳಲ್ಲಿ ಆ.31ರವರೆಗೆ ಕಠಿಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಕಂಟೈನ್​ಮೆಂಟ್​ ಜೋನ್​ಗಳ ಹೊರಗೆ ಯಾವ ಚಟುವಟಿಗೆಗಳನ್ನು ಅನುಮತಿ ನೀಡಬಹುದು ಎಂಬ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಡಲಾಗಿದೆ. ಇನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅನುಮತಿ ನೀಡಿರುವ ಕೇಂದ್ರ ಸರ್ಕಾರ, ಚಿತ್ರಮಂದಿರ , ಮನೋರಂಜನಾ ಪಾರ್ಕ್ ಗಳು , ಸ್ವಿಮ್ಮಿಂಗ್ ಫೂಲ್ ತೆರೆಯುವಂತಿಲ್ಲ ಎಂದು ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರೊಂದಿಗೆ ವಂದೇ ಭಾರತ ಮಿಷನ್ ಹೊರತಾದ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ ಇಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.