Sunday, January 19, 2025
ಕಡಬಸುದ್ದಿ

ಕಡಬ:- ವಾಟ್ಸಾಪ್ ನಲ್ಲಿ ಕೋಮು ಭಾವನೆ ಕೆರಳಿಸುವ ಸ್ಟೇಟಸ್  ಹಾಕಿದ ಬೋಲ್ಟ್ ಅಶ್ರಫ್ ವಿರುದ್ಧ ಭಜರಂಗಿಗಳಿಂದ ಕಡಬ ಠಾಣೆಗೆ ದೂರು- ಕಹಳೆ ನ್ಯೂಸ್

ಕಡಬ: ಇಲ್ಲಿನ ಕಳಾರ ನಿವಾಸಿ ಯುವಕನೋರ್ವ ತನ್ನ ಸ್ಟೇಟಸ್ ನಲ್ಲಿ ದನ ಸಾಗಾಟದ ವಿಚಾರದಲ್ಲಿ ಕೋಮುಭಾವನೆ ಕೆರಳಿಸುವ ರೀತಿಯಲ್ಲಿ ಸ್ಟೇಟಸ್ ಹಾಕಿದ್ದು ಇದರಿಂದ ಆಕ್ರೋಶಗೊಂಡಿರುವ ಹಿಂದೂ ಮುಖಂಡರು ಸಮಾಜದಲ್ಲಿ ಶಾಂತಿ ಕದಡುವ ಇಂತಹ ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದೂರು ನೀಡಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ವಿ.ಹಿಂ.ಪ.ವತಿಯಿಂದ ಕಡಬ ಠಾಣೆಗೆ ದೂರು ನೀಡಲಾಗಿದೆ. ಕಡಬ ಕಳಾರ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಅಶ್ರಫ್ ಎಂದು ತಿಳಿದು ಬಂದಿದ್ದು ಈತನನ್ನು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಹಿಂದೂ ಸಮಾಜದಿಂದ ಪ್ರತಿಭಟನೆ ಎದುರಿಸಬೇಕಾದಿತು.

ಅಶ್ರಫ್

ಇದರಿಂದ ಶಾಂತಿ ಕದಡಿದರೆ ನಾವು ಜವಾಬ್ದಾರಲ್ಲ ಎಂದು ದೂರಿನಲ್ಲಿ ಎಚ್ಚರಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ,ರವಿರಾಜ ಶೆಟ್ಟಿ ಕಡಬ, ವೆಂಕಟರಮಣ ರಾವ್,ರಾಧಾಕೃಷ್ಣ ಕೋಲ್ಪೆ, ಪ್ರಕಾಶ್ ಎನ್.ಕೆ, ಸಂತೋಷ್ ಸುವರ್ಣ,ವೆಂಕಟರಮಣ ಕುತ್ಯಾಡಿ, ರಾಮಚಂದ್ರ ಕೋಲ್ಪೆ,ಕಿಶಾನ್ ಕುಮಾರ್ ರೈ, ನಿತ್ಯಾನಂದ ಮೇಲ್ಮನೆ, ಸುರೇಶ್ ಕೋಟೆಗುಡ್ಡೆ, ಯೋಗೀಶ್, ದೇವಿಪ್ರಸಾದ್ ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.