Sunday, January 19, 2025
ಕ್ರೈಮ್ಸಂತಾಪಸಿನಿಮಾ

ಸಿನಿ ರಂಗಕ್ಕೆ ಮತ್ತೊಂದು ಆಘಾತ ; ಸುಶಾಂತ್ ಬೆನ್ನಲ್ಲೇ ಮತ್ತೊಬ್ಬ ಯುವನಟ ಆತ್ಮಹತ್ಯೆ – ಕಹಳೆ ನ್ಯೂಸ್

ಮುಂಬಯಿ: ಮರಾಠಿ ನಟ ಅಶುತೋಷ್ ಭಾಕ್ರೆ ಮರಾಠವಾಡ ಪ್ರಾಂತ್ಯದ ನಾಂದೇಡ್‌ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ಸಂಜೆ 32 ವರ್ಷದ ಅಶುತೋಷ್ ಗಣೇಶನಗರದ ಅವರ  ಪೋಷಕರ ಪ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದರೆ ಇವರು ಕಳೆದ ಕೆಲ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಅಲ್ಲದೇ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ವ್ಯಕ್ತಿಯೊಬ್ಬ ಯಾವ ಕಾರಣಕ್ಕೆ ಸಾಯುತ್ತಾನೆ ಎಂಬುದನ್ನು ವಿಶ್ಲೇಷಿಸಿದ್ದರು ಎನ್ನುತ್ತಿವೆ ಅಧೀಕೃತ ಮೂಲಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಖುಲ್ತಾ ಕಲಿ ಖುಲೇನಾ’ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ ನಟಿ ಮಯೂರಿ ದೇಶ್‌ಮುಖ್ ಅವರ ಪತಿ ಅಶುತೋಷ್‌. ‘ಭಾಕರ್’‌ ಹಾಗೂ ‘ಇಚಾರ್‌ ಥರ್ಲಾ ಪಕ್ಕ’ ಮರಾಠಿ ಸಿನಿಮಾಗಳಲ್ಲಿ ಈ ನಟ ನಟಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆತ್ಮಹತ್ಯೆಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ ಎಂದಿದ್ದಾರೆ ಪೊಲೀಸರು. ನಾಂದೇಡ್‌ನ ಶಿವಾಜಿನಗರ ಪೊಲೀಸ್‌ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ದೂರು ದಾಖಲಾಗಿದ್ದು, ಸಾವಿನ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.