Recent Posts

Monday, January 20, 2025
ಸುದ್ದಿ

ಬೇ’ಟೆಯಾಡಲು ಬಂದ ಹುಲಿಗೆ ‘ಮಂಗ’ ಮಾಡಿದ ಬಾತುಕೋಳಿ!-ನೋಡಿ ಈ ವೈರಲ್ ವಿಡಿಯೋ!- ಕಹಳೆ ನ್ಯೂಸ್

ಪ್ರಾಣಿಗಳಲ್ಲಿ ಬರೀ ಮಾನವನೇ ಜಾಣ ಎಂದು ತಿಳಿದರೆ ಹುಚ್ಚುತನವಾಗುತ್ತದೆ. ಯಾಕೆಂದರೆ ಪ್ರತಿಯೊಂದು ಪ್ರಾಣಿಯಲ್ಲಿ ಅವುಗಳಿಗೆ ತಕ್ಕಂತೆ ಬುದ್ಧಿ, ಜಾಣ್ಮೆ, ಶಕ್ತಿ, ಇದ್ದೆ ಇರುತ್ತದೆ. ಈ ವಿಡಿಯೋದಲ್ಲಿ ಬಾತುಕೋಳಿಯ ಜಾಣ್ಮೆಗೆ ಮೆಚ್ಚಲೇಬೇಕು.

ಬೇಟೆಯಾಡುವದರಲ್ಲಿ ಹುಲಿಗೆ ಚಾಣಾಕ್ಷ ಬೇಟೆಗಾರನೆಂದೇ ಪರಿಗಣಿಸಲಾಗುತ್ತದೆ. ಹೀಗಿರುವಾಗ ಹಸಿದ ಹುಲಿಯೊಂದು ನೀರಿನಲ್ಲಿ ಕಂಡ ಬಾತುಕೋಳಿಗೆ ಮುಗಿಸಿ ಹೊಟ್ಟೆ ತುಂಬಿಕೊಳ್ಳಬೇಕೆಂದು ಪ್ಲಾನ್ ಮಾಡಿ ನಿಧಾನವಾಗಿ ಅದರ ಹಿಂದೆ ಹೋಗಿದೆ. ಇನ್ನೇನು ಬಾತುಕೋಳಿಯನ್ನು ತನ್ನ ಹಿಡಿತದಲ್ಲಿ ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ಮೊದಲೇ ಜಾಗೃತವಾಗಿದ್ದ ಬಾತುಕೋಳಿ ಕ್ಷಣಾರ್ಧದಲ್ಲಿ ನೀರಿನೊಳಗೆ ಮುಳುಗಿ ಹುಲಿಗೆ ಯಾಮಾರಿಸಿ ಪೆದ್ದನನ್ನಾಗಿ ಮಾಡಿದೆ. ಪಾಪ, ಹುಲಿರಾಯ ಏನು ತೋಚದಂತಾಗಿ ಬಾತುಕೋಳಿಗೆ ಪೆಚ್ಚು ಮೊರೆ ಹಾಕಿ ನೀರಿನಲ್ಲಿ ಆ ಕಡೆ ಈ ಕಡೆ ಹುಡುಕಿದೆ. ಬಾತುಕೋಳಿ ಮಾತ್ರ ಅಲ್ಲಿಯೇ ಪಕ್ಕದಲ್ಲಿ ನೀರಿನಿಂದ ಎದ್ದು ‘ಕೂಲ್’ ಆಗಿ ಅಲ್ಲಿಂದ ಜಾರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು