Recent Posts

Sunday, January 19, 2025
ಸುದ್ದಿ

ಆಗಸ್ಟ್‌ 2 ಆದಿತ್ಯವಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಜಗದೀಶ್ ಆಚಾರ್ಯರವರ ‘ಈಶ ನಿನ್ನ ಚರಣ ಭಜನೆ.. ಆಸೆಯಿಂದ ಮಾಡುವೆನು’ ಆಲ್ಬಮ್ ವಿಡಿಯೋ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಖ್ಯಾತ ಗಾಯಕ, ಜಿಲ್ಲಾ ರಾಜ್ಯೋತ್ಸವ ಮತ್ತು ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ರವರ ‘ಈಶ ನಿನ್ನ ಚರಣ ಭಜನೆ.. ಆಸೆಯಿಂದ ಮಾಡುವೆನು’ ಸಾಂಗ್ ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 2 ರಂದು ಬಿಡುಗಡೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲರ್ಸ್‌ ಕನ್ನಡದ ಹಾಡು ಕರ್ನಾಟಕ  ಖ್ಯಾತಿಯ ಜಗದೀಶ್ ಆಚಾರ್ಯ ಈಗಾಗಲೇ ತನ್ನ ಅದ್ಭುತ ಕಂಠದಿಂದ ಗಾಯನ ಕ್ಷೇತ್ರದಲ್ಲಿ ಭಾರೀ ಹೆಸರು ಪಡೆದಿದ್ದಾರೆ. ಸ್ವಾಮಿ ಕೊರಗಜ್ಜ ಸೇರಿದಂತೆ ಅವರ ಅನೇಕ ಭಕ್ತಿಗೀತೆಗಳು ಯುಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಪಡೆದಿವೆ. ಇದೀಗ ಅವರದ್ದೇ ಆದ ‘ಜಗದೀಶ್ ಪುತ್ತೂರು’ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಥಮ ಬಾರಿಗೆ ಭಕ್ತಿ ಆಲ್ಬಂ ಸಾಂಗ್ ಬಿಡುಗಡೆಗೊಳಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಾಂಗ್‌ನ ಸಂಗೀತ ನಿರ್ದೇಶನ ಮತ್ತು ಗಾಯನವನ್ನು ಜಗದೀಶ್ ಆಚಾರ್ಯರೇ ಮಾಡಿದ್ದಾರೆ. ರಾಜೇಶ್ ಆಚಾರ್ಯ ಕೌಡೂರು ವಿಡಿಯೋ ನಿರ್ಮಾಣ ಮಾಡಿದ್ದಾರೆ. ಅರುಣ್ ರೈ ಪುತ್ತೂರು ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಜೆ.ಪಿ. ಬಂದ್ಯೊಟ್ಟು ಎಡಿಟಿಂಗ್ ನಲ್ಲಿ ಮತ್ತು ಶಶಿ ಆಚಾರ್ಯ ಕನ್ಯಾನ ಪ್ರಚಾರ ಕಲೆಯಲ್ಲಿ ಸಹಕರಿಸಿದ್ದಾರೆ.

ಕಹಳೆ ನ್ಯೂಸ್ ಮೀಡಿಯಾ ಪಾರ್ಟ್ನರ್ ಆಗಿ ಸಾಂಗ್ ಪ್ರಮೋಟ್ ಮಾಡಲಿದೆ.

ಜಗದೀಶ್‌ ಆಚಾರ್ಯ ಯೂಟ್ಯೂಬ್‌ ಚಾನಲ್‌ ..

 

http://www.youtube.com/jagadishputtur