ಶ್ರೀಕೃಷ್ಣನ ಅನುಗ್ರಹದಿಂದ ಕೊರೊನಾ ಗೆದ್ದುಬಂದ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ; ಶ್ರೀಗಳು ಫೀಟ್ ಆಂಡ್ ಫೈನ್ – ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ – ಕಹಳೆ ನ್ಯೂಸ್
ಉಡುಪಿ, ಆ. 02 : ಕೊರೊನಾ ಸೋಂಕು ದೃಢಪಟ್ಟಿದ್ದ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು 12 ದಿನಗಳ ಚಿಕಿತ್ಸೆ ಪಡೆದ ಬಳಿಕ ಆಗಸ್ಟ್ 1 ರ ಶನಿವಾರ ಇಲ್ಲಿನ ಕೆಎಂಸಿ ಮಣಿಪಾಲದಿಂದ ಬಿಡುಗಡೆ ಆಗಿದ್ದಾರೆ.
ಕೊರೊನಾ ಸೋಂಕು ಲಕ್ಷಣ ಕಾರಣ ಜುಲೈ 21 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಸ್ಪತ್ರೆಯಲ್ಲಿಯೂ ಅವರು ತಮ್ಮ ನಿತ್ಯ ಪೂಜೆಗಳನ್ನು ಮಾಡುತ್ತಿದ್ದರು. ತಮ್ಮ ವಾರ್ಷಿಕ ಚಾರ್ತುಮಾಸ ವ್ರತವನ್ನು ಆಸ್ಪತ್ರೆಯಲ್ಲಿಯೂ ಮಾಡುತ್ತಿದ್ದರು.
ಈಗ ಅವರು ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಅವರು ವೃತವನ್ನು ಆರಂಭಿಸಿರುವ ಪಾಡಿಗಾರು ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಈ ಬಗ್ಗೆ ಪ್ರಕಟನೆಯಲ್ಲಿ ತಿಳಿಸಿರುವ ಪುತ್ತಿಗೆ ಮಠದ ಆಡಳಿತ ಮಂಡಳಿ, “ಸ್ವಾಮೀಜಿ ಕೆಲವು ದಿನಗಳವರೆಗೆ ವಿಶ್ರಾಂತಿ ಪಡೆಯುತ್ತಾರೆ. ದಯವಿಟ್ಟು ಅವರನ್ನು ಭೇಟಿ ಮಾಡಲು ಬರಬೇಡಿ ಎಂದು ಮನವಿ ಮಾಡಿದ್ದು ಸ್ವಾಮೀಜಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ, ಪ್ರಾರ್ಥಿಸಿದ ಜನರಿಗೆ ಧನ್ಯವಾದ ತಿಳಿಸಿದರು.