Sunday, November 24, 2024
ಆರೋಗ್ಯಬೆಂಗಳೂರುರಾಜ್ಯಸುದ್ದಿ

ಕರೊನಾಗೆ ಆಯುರ್ವೇದ ಔಷಧ ಪ್ರಯೋಗ; ಬಿಎಂಸಿಆರ್​ಐ ನೋಟಿಸ್ ವಿಚಾರಕ್ಕೆ ಡಾ.ಗಿರಿಧರ ಕಜೆ ಹೇಳಿದ್ದೇನು? – ಕಹಳೆ ನ್ಯೂಸ್

ಬೆಂಗಳೂರು: ಕರೊನಾ ರೋಗಿಗಳ ಮೇಲೆ ಆಯುರ್ವೇದ ಔಷಧ ಪ್ರಯೋಗ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನೋಟಿಸೊಂದು ಹರಿದಾಡುತ್ತಿದೆ. ಇದು ಹಲವು ಗೊಂದಲಗಳಿಗೂ ಕಾರಣವಾಗಿತ್ತು.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್​ಐ) ಎಥಿಕಲ್ ಕಮಿಟಿ ಹೆಸರಲ್ಲಿರುವ ಲೆಟರ್​ ಹೆಡ್​ನಲ್ಲಿ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆಯವರಿಗೆ ನೋಟಿಸ್ ಎಂದು ಬರೆಯಲಾಗಿದೆ. ಇದರಲ್ಲಿ ಆಯುರ್ವೇದ ಔಷಧದ ಕ್ಲಿನಿಕಲ್​ ಟ್ರಯಲ್​ ಇನ್ನೂ ಜಾರಿಯಲ್ಲಿರುವಾಗಲೇ ಯಶಸ್ವಿಯಾಗಿದೆ ಎಂದು ಸಾರ್ವಜನಿಕವಾಗಿ ಘೋಷಿಸಿದ್ದೀರಿ ಎಂದು ಆಕ್ಷೇಪಿಸಲಾಗಿದೆ. ಇದು ಕ್ಲಿನಿಕಲ್​ ಟ್ರಯಲ್​ನ ನಿಯಮಗಳ ಉಲ್ಲಂಘನೆಯೂ ಆಗಿದೆ. ಈ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕೆಂದು ಬರೆಯಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ಡಾ. ಗಿರಿಧರ್​ ಕಜೆ ಪ್ರತಿಕ್ರಿಯೆ ನೀಡಿದ್ದು, ನನಗೆ ಯಾವುದೇ ನೋಟಿಸ್​ ತಲುಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್​ಐ) ಎಥಿಕಲ್ ಕಮಿಟಿ 17.07.2020 ರಂದು ನೋಟಿಸ್​ ಎಂದು ಎಂದು ಪತ್ರವೊಂದು ಹರಿದಾಡುತ್ತಿದೆ. ಅದರೊಂದಿಗೆ ಹಲವು ವದಂತಿಗಳನ್ನು ಹಬ್ಬಿಸಲಾಗಿದೆ. ಅಂಥ ಯಾವುದೇ ನೋಟಿಸ್​ ನನಗೆ ತಲುಪಿಲ್ಲ. ಇದು ನನಗೆ ಹಅಗೂ ನನ್ನ ಪ್ರೀತಿಪಾತ್ರರಿಗೆ ನೋವನ್ನುಂಟು ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಲಾಗಿದ್ದು, ಉನ್ನತ ಧ್ಯೇಯವೊಂದಕ್ಕೆ ಸೋಲಾಗದಿರಲಿ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಲಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದ ಲಾಬಿ ವಿಚಾರದ ವದಂತಿಗೆ ಇನ್ನಷ್ಟು ಪುಷ್ಟಿಯನ್ನು ತುಂಬಿದೆ. ಇವೆಲ್ಲದರ ನಡುವೆ, ಇಂದು ಸಂಜೆ ಡಾ.ಗಿರಿಧರ ಕಜೆಯವರು ನಾಳೆ ಸಂಜೆ ಫೇಸ್​ಬುಕ್​ ಲೈವ್​ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿ ಕುತೂಹಲವನ್ನು ಮೂಡಿಸಿದ್ದಾರೆ.