Sunday, January 19, 2025
ಕಾಸರಗೋಡುದಕ್ಷಿಣ ಕನ್ನಡರಾಜ್ಯಸುದ್ದಿ

ಕಾಸರಗೋಡು – ದಕ್ಷಿಣ ಕನ್ನಡ ಜಿಲ್ಲೆ : ನಿಬಂಧನೆಗಳೊಂದಿಗೆ ಸಂಚಾರ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್ – ಕಹಳೆ ನ್ಯೂಸ್

ಕಾಸರಗೋಡು, ಆ. 03 : ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಗಡಿ ತೆರವಿಗೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲಾಡಳಿತ ಹಾಗೂ ಕಾಸರಗೋಡು ಉಸ್ತುವಾರಿ ಸಚಿವರ ಸಭೆ ಇಂದು ನಡೆದಿದ್ದು ಈ ಹಿಂದೆ ಇದ್ದ ದೈನಂದಿನ ಪಾಸ್‌ನ್ನು ಕೆಲವೊಂದು ನಿಬಂಧನೆಗಳೊಂದಿಗೆ ಪುನರ್‌ ಆರಂಭ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಗಡಿ ಜಿಲ್ಲೆಗಳ ನಡುವೆ ಸಂಚಾರ ಮಾಡುವವರು ಏಳು ದಿನಕ್ಕೊಮ್ಮೆ ಕೋವಿಡ್ ತಪಾಸಣೆಗೆ ಒಳಗಾಗಬೇಕಾಗಿದ್ದು ವಿವಾಹ, ಮರಣ ಮೊದಲಾದ ಕಾರ್ಯಕ್ರಮಗಳಿಗೆ ಅಂತಾರಾಜ್ಯ ಸಂಚಾರಕ್ಕೆ ನಿಬಂಧನೆಗಳೊಂದಿಗೆ ಅನುಮತಿ ನೀಡಲಾಗಿದೆ. ಅಂತಾರಾಜ್ಯ ಸಂಚಾರ ಮಾಡುವವರು ಆಂಟಿಜನ್ ತಪಾಸಣೆಗೆ ಒಳಗಾಗಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಸರಗೋಡು ಜಿಲ್ಲೆ ರಾಜ್ಯ ಗಡಿ ತೆರವು ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಆದರೆ ಈ ಮೊದಲು ಉದ್ಯೋಗದ ನಿಮಿತ ಅಂತರ್‌ ರಾಜ್ಯ ಸಂಚಾರ ಮಾಡುವವರಿಗೆ ನೀಡಲಾಗುತ್ತಿದ್ದ ದೈನಂದಿನ ಪಾಸ್‌ನ್ನು ಪುನರ್‌ ಆರಂಭಿಸಲಾಗಿದೆ. ಆದರೆ ತಲಪಾಡಿ ಗಡಿಯಲ್ಲಿ ಮಾತ್ರ ಪಾಸ್‌ ನೀಡುತ್ತಾರ ಅಥವಾ ಎಲ್ಲಾ ಗಡಿಯಲ್ಲಿ ಪಾಸ್‌ ಮೂಲಕ ಪ್ರವೇಶಕ್ಕೆ ಅವಕಾಶವಿದೆಯಾ ಎಂಬ ಮಾಹಿತಿ ಇನ್ನಷ್ಟೇ ದೊರಕಬೇಕಾಗಿದೆ.

ಕಂಟೈನ್ ಮೆಂಟ್ ವಲಯ ಹೊರತು ಪಡಿಸಿ ಉಳಿದೆಡೆ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ 8 ರಿಂದ ರಾತ್ರಿ 9 ರ ತನಕ ತೆರೆಯಬಹುದಾಗಿದ್ದು ಆಹಾರ ಸಾಮಾಗ್ರಿಗಳ ಸಾಗಾಟ ಮಾಡುವ ವಾಹನಗಳು ಷರತ್ತುಗಳೊಂದಿಗೆ ಕರ್ನಾಟಕಕ್ಕೆ ತೆರಳಲು ಅನುಮತಿ ನೀಡಲಾಗಿದೆ.

ಕೋವಿಡ್ ಮಾನದಂಡ ಪಾಲಿಸಿ ಆಟೋ ರಿಕ್ಷಾಗಳು ಸಂಚಾರ ನಡೆಸಬಹುದಾಗಿದ್ದು ರಾಷ್ಟೀಯ ಹೆದ್ದಾರಿ ಪಕ್ಕದ ಹೋಟೆಲ್ ಗಳನ್ನು ಬೆಳಿಗ್ಗೆ 8 ರಿಂದ ರಾತ್ರಿ 9 ರ ತನಕ ತೆರೆಯಬಹುದಾಗಿದೆ. ಆದರೆ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿದೆ.