Sunday, January 19, 2025
ಪುತ್ತೂರು

ಶ್ರೀ ದೇವೀ ಭಜನಾ ಮಂಡಳಿ ಹಾಗೂ ಧರ್ಮಶ್ರೀ ವಿಶ್ವಸ್ಥ ಮಂಡಳಿ(ರಿ) ಗಾಂಧಿನಗರ ಕೆದಿಲ ಇದರ ವತಿಯಿಂದ ರಾಮನಾಮ ತಾರಕ ಮಂತ್ರ ಪಠಣ ಮತ್ತು ಕರಸೇವಕರಿಗೆ ಗೌರವಾರ್ಪಣಾ ಕಾರ್ಯಕ್ರಮ- ಕಹಳೆ ನ್ಯೂಸ್

ಶ್ರೀ ದೇವೀ ಭಜನಾ ಮಂಡಳಿ ಹಾಗೂ ಧರ್ಮಶ್ರೀ ವಿಶ್ವಸ್ಥ ಮಂಡಳಿ(ರಿ) ಗಾಂಧಿನಗರ ಕೆದಿಲ ಇದರ ವತಿಯಿಂದ ಅಯೋಧ್ಯೆಯಲ್ಲಿ ನಮ್ಮೆಲ್ಲರ ಆರಾಧ್ಯ ಮೂರ್ತಿ ಪ್ರಭು ಶ್ರೀ ರಾಮಚಂದ್ರನ ಭವ್ಯ ಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದ ಸಂಭ್ರಮವನ್ನು ಕೆದಿಲ ಗ್ರಾಮಸ್ಥರು ಸೇರಿವಿಶೇಷವಾಗಿ ಸಂಭ್ರಮಿಸುವ ಒಂದು ಪುಟ್ಟ ಕಾರ್ಯಕ್ರಮ ವನ್ನು ಇಂದು ಬೆಳಿಗ್ಗೆ 11:40ರಿಂದ 12:30ರ ವರೆಗೆ ಶ್ರೀ ದೇವೀ ಭಜನಾ ಮಂದಿರದ ವಠಾರದಲ್ಲಿ ಆಚರಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆಯು ಜಗತ್ತಿನ ಹಾಗೂ ಭಾರತ ದೇಶದ ಹಿಂದೂಗಳಿಗೆ‌ ಇಂದು (05-08-20200) ಬುಧವಾರ ಐತಿಹಾಸಿಕ ದಿನ. ಶ್ರೀರಾಮ ಭಕ್ತರ ಶತಮಾನಗಳ ತ್ಯಾಗ ಬಲಿದಾನದ ಹೋರಾಟಗಳ ಉದ್ದೇಶ ನನಸಾಗುವ ಕ್ಷಣ. ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರದ ಶಿಲಾನ್ಯಾಸ ಕಾರ್ಯಕ್ರಮವು ಬೆಳಿಗ್ಗೆ 11:40 ಕ್ಕೆ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವಾರು ರಾಮಭಕ್ತ ಕಾರ್ಯಕರ್ತರ ಸಮ್ಮುಖದಲ್ಲಿ ನಡೆದಿದ್ದು ಅದೇ ಸಮಯದಲ್ಲಿ ಮಂದಿರ ನಿರ್ಮಾಣದ ಕಾರ್ಯ ಆದಷ್ಟು ಶೀಘ್ರದಲ್ಲಿ, ನಿರ್ವಿಘ್ನವಾಗಿ ನೆರವೇರಲಿ ಎನ್ನುವ ಪ್ರಾರ್ಥನೆಯೊಂದಿಗೆ,
ರಾಮನಾಮ ತಾರಕ ಮಂತ್ರ ಪಠಣ ಹಾಗೂ 1990ರ ಆ ಸಮಯದಲ್ಲಿ ನಮ್ಮ ಕೆದಿಲ ಗ್ರಾಮದಿಂದ ಅಯೋಧ್ಯ ಗೆ ಕರಸೇವಕರಾಗಿ ತೆರಳಿ ಸೆರೆವಾಸ ಅನುಭವಿಸಿದ ರಾಮ ಭಕ್ತರನ್ನು ನೆನಪಿಸಿ ಗೌರವಿಸುವ ಕಾರ್ಯಕ್ರಮ ಶ್ರೀ ದೇವೀ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

1990ರ ಆ ಸಮಯದಲ್ಲಿ ಕರಸೇವಕರಾಗಿ ತೆರೆಳಿ ಸೆರೆವಾಸ ಅನುಭವಿಸಿದ ರಾಮ್ ಭಟ್ ಮೈರಾ, ಚೆನ್ನಪ್ಪ ಗೌಡ ಕುದುಮಾನು, ಈಶ್ವರ ಸಪಲ್ಯ ವಾಲ್ತಾಜೆ, ಸುಬ್ರಮಣ್ಯ ಭಟ್ ಬಡೆಕ್ಕಿಲ ಇವರನ್ನು ಗೌರವಿಸಲಾಯಿ.ಕಾರ್ಯಕ್ರಮ ದಲ್ಲಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು,ಹಾಗೂ ಮಂಡಳಿಯ ಪದಾಧಿಕಾರಿಗಳು,ಭಜನಾ ಮಂಡಳಿಯ ಅಧ್ಯಕ್ಷರಾದ ಕೃಷ್ಣಪ್ಪ ಕುಲಾಲ್ ಕಂಪ ಹಾಗೂ ಮಂಡಳಿಯ ಪದಾಧಿಕಾರಿಗಳು,ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಜೆ ಕೃಷ್ಣ ಭಟ್ ಮಿರಾವನ ಹಾಗೂ ಕಮಿಟಿಯ ಪದಾಧಿಕಾರಿಗಳು, ಶ್ರೀ ದೇವೀ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು, ನಿವೃತ್ತ ಸೈನಿಕರಾದ ಜನಾರ್ಧನ ಕುಲಾಲ್ ಗಾಣದ ಕೊಟ್ಯ, ಪ್ರಮುಖರಾದ ಭೀಮ ಭಟ್ ಮಿರಾವನ, ಮುರಳೀಧರ ಶೆಟ್ಟಿ ಕಲ್ಲಾಜೆ, ಬಾಳಪ್ಪ ಗೌಡ ಕುದುಂಬ್ಲಾಡಿ,ಶ್ರೀ ಕೃಷ್ಣ ಉಪಾದ್ಯಾಯ, ಶಿವಶಂಕರ ಪುತ್ತೂರಾಯ, ಕಾಂತಪ್ಪ ಗೌಡ ಕೊಳಚಪ್ಪು, ಮಾರಪ್ಪ ಸುವರ್ಣ ಪೆರಮುಗೇರು, ನಾರಾಯಣ ಕುಲಾಲ್ ಗಡಿಯಾರ ಇನ್ನಿತರ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಮೇಶ್ ಗಾಂಧಿನಗರ ಕಾರ್ಯಕ್ರಮ ನಿರೂಪಿಸಿದರು. ಮೋನಪ್ಪ ಗೌಡ ಕುದುಮಾನು ವಂದನಾರ್ಪಣೆ ಮಾಡಿದರು. ಸೇರಿದ ಗ್ರಾಮದ ಎಲ್ಲಾ ರಾಮ ಭಕ್ತರಿಗೆ ಭಜನಾ ಮಂಡಳಿ ವತಿಯಿಂದ ಲಘು ಪಾನೀಯ ಮತ್ತು ಸಿಹಿ ತಿಂಡಿ ನೀಡಲಾಯಿತು.