Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಕರಾವಳಿಯಲ್ಲಿ ಧಾರಾಕಾರ ಮಳೆ – ಡ್ಯಾಮ್‌, ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳ ; ಅಪಾಯದ ಮಟ್ಟ ತಲುಪುತ್ತಿದೆ ನೇತ್ರಾವತಿ ನದಿ – ಕಹಳೆ ನ್ಯೂಸ್

ಮಂಗಳೂರು, ಆ. 06  : ಕರಾವಳಿ ಭಾಗಗಳಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು ನೇತ್ರಾವತಿ ನದಿಯು ಅಪಾಯದ ಮಟ್ಟ ತಲುಪುತ್ತಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರೀ ಮಳೆಯಾದ ಕಾರಣ ಬಂಟ್ವಾಳಕ್ಕಿಂತ ಮೇಲ್ಭಾಗದಲ್ಲಿರುವ ಶಂಭೂರು ಎಎಂಆರ್‌ ಡ್ಯಾಂನಲ್ಲಿ ನೀರಿನ ಪ್ರಮಾಣ 18.9 ಮೀ. ಹೆಚ್ಚಳವಾಗಿದ್ದು ಗುರುವಾರ 8 ಗೇಟ್‌ಗಳನ್ನು ಶೇ. 50 ರಷ್ಟು ಹಾಗೂ 1 ಗೇಟನ್ನು ಶೇ. 40 ರಷ್ಟು ತೆರೆಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ತುಂಬೆ ಡ್ಯಾಮ್‌ನಲ್ಲೂ ಕೂಡಾ ನೀರಿನ ಪ್ರಮಾಣ 6.40 ಮೀ. ಗೆ ಏರಿಕೆಯಾಗಿದ್ದು ಮೂವತ್ತು ಗೇಟ್‌ಗಳನ್ನು ಕೂಡಾ ತೆರೆಯಲಾಗಿದೆ.

ಗುಂಡ್ಯ ನದಿಯಲ್ಲಿ ಅಪಾಯದ ಮಟ್ಟ 5 ಮೀ. ಆಗಿದ್ದು ಪ್ರಸ್ತುತ ನೀರಿನ ಪ್ರಮಾಣ 4.7 ಮೀ. ಗೆ ಏರಿಕೆಯಾಗಿದೆ. ನೇತ್ರಾವತಿ ನದಿ ಬಂಟ್ವಾಳ ಭಾಗದಲ್ಲಿ 7.6 ಮೀ. ನೀರಿನ ಪ್ರಮಾಣವಿದೆ. ನೇತ್ರಾವತಿ ಉಪ್ಪಿನಂಗಡಿ ಭಾಗದಲ್ಲಿ 29.0 ಮೀ. ನೀರಿನ ಪ್ರಮಾಣವಿದ್ದು 31.5 ಮೀ. ಅಪಾಯದ ಮಟ್ಟವಾಗಿದೆ. ಇನ್ನು ಕಡಬದ ದಿಶಾ ಡ್ಯಾಮ್‌ನಲ್ಲಿ ನೀರಿನ ಪ್ರಮಾಣ 4.7 ಮೀಟರ್‌ಗೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧರ್ಮಸ್ಥಳ ಸ್ನಾನಘಟ್ಟ ಮುಳುಗಡೆಯಾಗುವ ಭೀತಿಯೂ ಕೂಡಾ ಉಂಟಾಗಿದೆ. ಹಾಗೆಯೇ ಹಲವು ಕಡೆಗಳಲ್ಲಿ ಮನೆಗಳಿಗೆ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ.