ಆಯ್ಯೋ ದೇವಾ….! Breaking News : ಮಂಗಳೂರಿನ ಖಾಸಗಿ ಚಾನೆಲ್ ನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ; ಖ್ಯಾತ ನಟ ಅರವಿಂದ್ ಬೋಳಾರ್ ಹಾಗೂ ವಾಹಿನಿ ಮುಖ್ಯಸ್ಥ ವಾಲ್ಟರ್ ನಂದಳಿಕೆ ವಿರುದ್ಧ ಪೊಲೀಸರಿಗೆ ದೂರು, ಭಜರಂಗಿಗಳ ಆಕ್ರೋಶ – ಕಹಳೆ ನ್ಯೂಸ್
ಮಂಗಳೂರು : ನಗರದ ಖಾಸಗಿ ಚಾನೆಲ್ ನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತರುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಖ್ಯಾತ ಚಲನಚಿತ್ರ ನಟ ಅರವಿಂದ್ ಬೋಳಾರ್ ಹಾಗೂ ವಾಲ್ಟ್ರರ್ ನಂದಳಿಕೆ ವಿರುದ್ಧ ಕಾವೂರು ಪೊಲೀಸ್ ಠಾಣೆಗೆ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾವೂರು ಪ್ರಖಂಡದ ಸದಸ್ಯರು ದೂರು ನೀಡಿದ್ದಾರೆ.
ಹಿಂದೂಗಳ , ಹಿಂದೂಗಳ ಧಾರ್ಮಿಕ ಆಚರಣೆ ,ದೈವ ದೇವರ ಹಾಗೂ ಸ್ವಾಮೀಜಿಗಳ ವಿರುದ್ಧ ವಿಡಂಬನೆಯಾಗಿ ಜಿಲ್ಲೆಯ ಯಾವುದೇ ಚಲನಚಿತ್ರ, ನಾಟಕ ಯಾವುದರಲ್ಲೂ ಯಾರೇ ಆದರೂ ಅದನ್ನು ವಿಶ್ವಹಿಂದೂ ಪರಿಷತ್ ಬಜರಂಗದಳ ಮಂಗಳೂರು ವಿರೋಧಿಸುತ್ತದೆ. ಅದರ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತದೆ. ಬಜರಂಗದಳ ಮುಸ್ಲಿಮರ ವಿರೋಧಿಗಳಲ್ಲ, ಕ್ರೈಸ್ತರ ವಿರೋಧಿಗಳಲ್ಲ ಹಿಂದುತ್ವದ ಸಮರ್ಥಕರು ಅಷ್ಟೇ ಎಂದು ಆಕ್ರೋಶ ಹೊರಹಾಕಿದೆ.