Recent Posts

Thursday, November 21, 2024
ಪುತ್ತೂರು

ಅಂಬಿಕಾ ಸಮೂಹ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ- ಕಹಳೆ ನ್ಯೂಸ್

ಪುತ್ತೂರು : ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ೨೦೨೦ ಆಗಸ್ಟ್ ೧೧ ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ನಡೆಯಿತು.
ಸಮಾರಂಭದಲ್ಲಿ ಅಂಬಿಕಾ ಪದವಿ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿದ್ವಾನ್ ವಿನಾಯಕ ಭಟ್ಟ ಗಾಳಿಮನೆ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.ಭಗವಾನ್ ಶ್ರೀಕೃಷ್ಣ ಶ್ರಾವಣ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಈ ಧರೆಗೆ ಅವತಾರವೆತ್ತಿದ .

ಈ ದಿವಸ ಭಾರತೀಯರ ಪಾಲಿಗೆ ಸಂಭ್ರಮದ ದಿನ, ಕಾರಾಗ್ರಹದಲ್ಲಿ ಹುಟ್ಟಿದ ಪರಮಾತ್ಮನು ಜಗದ ಕತ್ತಲೆಯನ್ನು ದೂರ ಮಾಡಿದ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ಪೊರೆದವನು,ಒಳ್ಳೆಯ ಸ್ನೆಹಿತನಾಗಿ, ಗೋವುಗಳ ರಕ್ಷಣೆ, ಗೋವರ್ಧನ ಗಿರಿಯ ಉದ್ಧಾರ, ಕಾಳಿಂಗ ಮರ್ಧನ, ಮಾವ ಕಂಸನ ವಧೆ,ಹೀಗೆ ಅಧರ್ಮದ ನಾಶ ಹಾಗುಧರ್ಮದ ಉಳಿವಿಗಾಗಿ ಶ್ರಮಿಸಿದವನು. ಶ್ರೀಮನ್ನಾರಾಯಣನ ಹತ್ತು ಅವತಾರಗಳಲ್ಲಿ ಶ್ರೀಕೃಷ್ಣನ ಅವತಾರವೂ ಒಂದು. ನಾವು ನಮ್ಮ ಜೀವನದಲ್ಲಿ ಇಬ್ಬರು ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕಾದುದು ಅನಿವಾರ್ಯವಾದುದೆ ಸರಿ, ಅಂದರೆ ಒಂದು ಶ್ರೀರಾಮಚಂದ್ರನ ನಡೆಯನ್ನು ಅನುಸರಿಸುವುದು, ಹಾಗೂ ಶ್ರೀಕೃಷ್ಣನ ನುಡಿಯನ್ನು ಪಾಲನೆ ಮಾಡುವುದು ಇವೆರಡನ್ನು ನಾವು ಮಾಡಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಿಟ್ಟಿನಲ್ಲಿ ನಾವೆಲ್ಲರೂ ಭಗವಂತನ ಅನುಗ್ರಹವನ್ನು ಪಡೆಯುವಂತೆ ಪ್ರಾರ್ಥಿಸೋಣ ಅಲ್ಲದೆ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗು ಶ್ರೀ ರಾಮ ಹುಟ್ಟಿದ ರಾಮನವಮಿಯನ್ನು ಭಾರತೀಯರಾದ ನಾವೆಲ್ಲರೂ ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ನಟ್ಟೋಜ ಶಿವಾನಂದ ರಾವ್,ಸಂಸ್ಥೆಯ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ನಟ್ಟೋಜ, ನಟ್ಟೋಜ ಫೌಂಡೇಶನ್ ಟ್ರಸ್ಟಿನ ಖಜಾಂಜಿ ಶ್ರೀಮತಿ ರಾಜಶ್ರೀ ನಟ್ಟೋಜ, ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಶಂಕರನಾರಾಯಣ ಭಟ್, ಬಾಲವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಸುಜನಿ ಬೋರ್ಕರ್, ವಿದ್ಯಾಲಯದ ಉಪನ್ಯಾಸಕರು, ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

.ಶ್ರೀಮತಿ ಅಶ್ವಿನಿ ಪ್ರಾರ್ಥಿಸಿದರು , ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಶ್ರೀ ಸತೀಶ್ ನಿರೂಪಿಸಿ,ವಂದಿಸಿದರು. ಬಳಿಕ ಶಿಕ್ಷಕ ವೃಂದದವರಿಂದ ಶ್ರೀಕ್ರಷ್ಣನ ಭಜನಾಸಂಕೀರ್ತನೆ ನಡೆಯಿತು.