SSLC ಫಲಿತಾಂಶ : ತೃತೀಯ ಭಾಷೆ ತುಳು ಪಠ್ಯ ; ರಾಮಕುಂಜ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ – ಕಹಳೆ ನ್ಯೂಸ್
ರಾಮಕುಂಜ: 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ತುಳು ವಿಷಯದಲ್ಲಿ ರಾಮಕುಂಜ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ಬಂದಿದೆ.
ಸಂಸ್ಥೆಯಲ್ಲಿ ತುಳು ವಿಷಯದಲ್ಲಿ ಪರೀಕ್ಷೆ ಬರೆದ ಎಲ್ಲಾ ೪೩ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಈ ಪೈಕಿ ೨೬ ವಿದ್ಯಾರ್ಥಿಗಳು ತಲಾ ೧೦೦ ಅಂಕ ಪಡೆದುಕೊಂಡಿದ್ದಾರೆ. ಜೇಷ್ಮಾ ಎಸ್.ಬಿ., ಜೀವಿತ, ಗೌತಮಿ ವಿ.ಎಸ್., ನಮಿತ, ಶ್ರದ್ಧಾ ರೈ, ಕೆ.ಎಸ್.ಭಾರ್ಗವಿ, ಸೌಜನ್ಯ, ಪ್ರಣಾಮ್ ಎಮ್., ಸಂದೀಪ್ ಆರ್., ತೇಜಸ್ ರೈ, ಮಹಮ್ಮದ್ ಝಾಹಿರ್, ನಿತೇಶ್, ಪ್ರಜ್ವಲ್, ಶ್ರವಣ್, ಶ್ರೀಜಿತ್, ಪುನೀತ್, ಹಿತೇಶ್ ಗೌಡ, ಶ್ರೀರಾಮ, ಗೌತಮ್, ಜಿತೇಶ್, ಪ್ರಕಾಶ್ ಬಿ.ಕೆ., ಮಹಾದೇವ ಸ್ವಾಮಿ, ಸಾಗರ್ ಹೆಚ್.ವೈ., ಶಿವಾನಂದ ಬಿ ಮುತಗೊಂಡ, ಧನುಶ್ ಎಚ್.ಎಚ್.,ರವರು ೧೦೦ಕ್ಕೆ ೧೦೦ ಅಂಕ ಪಡೆದುಕೊಂಡಿದ್ದಾರೆ. ಮಹಮ್ಮದ್ ಸುಫೈಲ್ ೯೮, ಸುಮಂತ್ ಗೌಡ ೯೭, ವಿನಯ್ ಆರ್. ೯೭, ಮನೀಶ್ ಎಮ್. ೯೭, ಶರತ್ ಎ.ಸಿ. ೯೫, ತಿಲಕ್ ಎಸ್.ಜೆ. ೯೧, ಯಶಸ್ ಗೌಡ ಯನ್.ಎಮ್.೯೦, ಅತೀಶ್‌ಕುಮಾರ್ ೯೦, ಯಶಸ್ ಎಚ್.ಎಸ್. ೯೦, ವರುಣ್ ಡಿ.ಸಿ. ೯೦ ಅಂಕ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ತಿಳಿಸಿದ್ದಾರೆ.