Sunday, January 19, 2025
ಶಿಕ್ಷಣಸುದ್ದಿ

SSLC ಫಲಿತಾಂಶ : ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಗೆ ಶೇಕಡಾ 96.5 ; ಕನ್ನಡ ಮಾಧ್ಯಮ ಶಾಲೆಗೆ 95 ಶೇ. ಫಲಿತಾಂಶ – ಕಹಳೆ ನ್ಯೂಸ್

ಕಾಣಿಯೂರು : ೨೦೧೯-೨೦ನೇ ಸಾಲಿನ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯು ೯೬.೫ಶೇಕಡಾ ಫಲಿತಾಂಶವನ್ನು ಗಳಿಸಿಕೊಂಡಿದೆ. ಜೊತೆಗೆ ಕನ್ನಡ ಮಾಧ್ಯಮ ವಿಭಾಗದಲ್ಲಿ ೯೫ಶೇಕಡಾ ಫಲಿತಾಂಶ ಗಳಿಸಿಕೊಂಡಿದೆ. ಆಂಗ್ಲ ಮಾಧ್ಯಮ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ೫೭ ವಿದ್ಯಾರ್ಥಿಗಳಲ್ಲಿ ೫೫ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಕಲ್ಮಡ್ಕ ಸದಾಶಿವ ಭಟ್ ಮತ್ತು ಪೂರ್ಣಿಮಾ ದಂಪತಿ ಪುತ್ರಿ ಶ್ರೀವಿದ್ಯಾ ೬೦೮ ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ದೋಳ್ಪಾಡಿ ಪಿಜಕ್ಕಳ ವೇದವ್ಯಾಸ ರೈ ಮತ್ತು ನವೀನ ದಂಪತಿ ಪುತ್ರಿ ಪೌರ್ಶಿ ವಿ.ರೈ ೬೦೫ ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪಂಜ ಅನಂತಕೃಷ್ಣ ಮತ್ತು ಶಾಂತಲಾ ದಂಪತಿ ಪುತ್ರಿ ಅಖಿಲಾ ೬೦೩ ಅಂಕ ಪಡೆದುಕೊಂಡು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ತೇರ್ಗಡೆಗೊಂಡಿರುವ ೫೭ ವಿದ್ಯಾರ್ಥಿಗಳಲ್ಲಿ ೪೫ ವಿದ್ಯಾರ್ಥಿಗಳು ೫೦೦ ಕ್ಕಿಂತ ಹೆಚ್ಚು ಅಂಕಗಳಿಸಿರುತ್ತಾರೆ ಎಂದು ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಗುರು ಗಿರಿಶಂಕರ ಸುಲಾಯ ಹಾಗೂ ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ ತಿಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡ ಮಾಧ್ಯಮ ಶೇ ೯೫ ಫಲಿತಾಂಶ: ವಿದ್ಯಾಸಂಸ್ಥೆಯ ಕನ್ನಡ ಮಾಧ್ಯಮ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ೩೮ ಮಂದಿ ವಿದ್ಯಾರ್ಥಿಗಳಲ್ಲಿ ೩೫ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ ೯೫ ಫಲಿತಾಂಶ ಲಭಿಸಿದೆ. ಬಂಬಿಲ ಧನಂಜಯ ಮತ್ತು ಕವಿತಾ ದಂಪತಿ ಪುತ್ರಿ ಅಪೇಕ್ಷಾ ೫೯೩ ಅಂಕ ಪಡೆದುಕೊಂಡು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕಾಣಿಯೂರು ಮಿತ್ತಮೂಲೆ ಮಾಧವ ಮತ್ತು ಸೀತಮ್ಮ ದಂಪತಿ ಪುತ್ರಿ ಕ್ಷೇಮಾ ೫೭೫ ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಐವತ್ತೊಕ್ಲು ಸಾಬ್‌ಜಾನು ಸಾಹೇಬ್ ಮತ್ತು ಶಾಹಿದಾ ದಂಪತಿ ಪುತ್ರಿ ಶಾಯಿರಿನ್ ಬಾನು ೫೪೩ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ತೇರ್ಗಡೆಗೊಂಡಿರುವ ೩೫ ವಿದ್ಯಾರ್ಥಿಗಳಲ್ಲಿ ೧೦ ಮಂದಿ ವಿದ್ಯಾರ್ಥಿಗಳು ೫೦೦ ಕ್ಕಿಂತ ಹೆಚ್ಚು ಅಂಕಗಳಿಸಿರುತ್ತಾರೆ.