Recent Posts

Sunday, January 19, 2025
ರಾಷ್ಟ್ರೀಯಸಿನಿಮಾಸುದ್ದಿ

ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ : ಚಿಕಿತ್ಸೆಗಾಗಿ ಶೀಘ್ರವೇ ವಿದೇಶ ಪ್ರಯಾಣ – ಕಹಳೆ ನ್ಯೂಸ್

ನಟ ಸಂಜಯ್​ ದತ್​ಗೆ ಉಸಿರಾಟದ ತೊಂದರೆ ಇರುವ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸಂಜಯ್​ ದತ್​ಗೆ ಶ್ವಾಸಕೋಶದ ಕ್ಯಾನ್ಸರ್​ ಇರುವ ವಿಚಾರ ತಿಳಿದು ಬಂದಿದೆ.

ಸಿನಿಮಾ ವಿಮರ್ಶಕ ಕೋಮಲ್ ನಹ್ತಾ ಅವರು ‘ಸಂಜಯ್ ದತ್ ಅವರು ಲಂಗ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರು ಬೇಗ ಹುಷಾರಾಗಲಿ ಎಂದು ಪ್ರಾರ್ಥಿಸಿ’ ಎಂದು ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಯಾನ್ಸರ್ ಈಗ ಮೂರನೇ ಹಂತಕ್ಕೆ ತಲುಪಿದೆಯಂತೆ. ಇದರ ಬಗ್ಗೆ ಸ್ವತಃ ಸಂಜಯ್ ದತ್ ಮಾಹಿತಿ ನೀಡಬೇಕಿದೆ. ನಟ ಸಂಜಯ್ ದತ್ ಅವರ ಚಿಕ್ಕ ಮಕ್ಕಳು ಹಾಗೂ ಪತ್ನಿ ದುಬೈನಲ್ಲಿ ಇದ್ದಾರೆ. ಕೊರೊನಾ ವೈರಸ್, ಲಾಕ್‌ಡೌನ್‌ನಿಂದಾಗಿ ಇವರು ಯಾರೂ ಕೂಡ ಭಾರತಕ್ಕೆ ಮರಳಲು ಆಗಲಿಲ್ಲ. ಅದರ ಜೊತೆಗೆ ಸಂಜಯ್ ದತ್ ಆತ್ಮೀಯರು ಹೇಳಿರುವಂತೆ ಕ್ಯಾನ್ಸರ್ ಗುಣಮುಖವಾಗುವುದು ಆದರೆ ಶೀಘ್ರವೇ ಸರಿಯಾದ ಚಿಕಿತ್ಸೆ ಸಿಗಬೇಕು. ಹೀಗಾಗಿ ಸಂಜಯ್ ದತ್ ಅವರು ಯುಎಸ್‌ಗೆ ತೆರಳಲಿದ್ದಾರೆ ಎಂದು ತಿಳಿದು
ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜಯ್ ದತ್​ ತಮಗೆ ಕ್ಯಾನ್ಸರ್​ ಇರುವ ವಿಚಾರವನ್ನು ನೇರವಾಗಿ ಹೇಳಿಕೊಂಡಿಲ್ಲ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು​ ನಾನು ವೈದ್ಯಕೀಯ ಚಿಕಿತ್ಸೆ ದೃಷ್ಟಿಯಿಂದ ಚಿಕ್ಕ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬ ಹಾಗೂ ಗೆಳೆಯರು ನನ್ನ ಜೊತೆ ಇದ್ದಾರೆ. ನನ್ನ ಬಗ್ಗೆ ಚಿಂತೆ ಬೇಡ. ನಿಮ್ಮ ಹಾರೈಕೆ ನನ್ನ ಮೇಲಿರಲಿ. ನಾನು ಬೇಗ ವಾಪಾಸಾಗುತ್ತೇನೆ, ಎಂದು ಅವರು ಬರೆದುಕೊಂಡಿದ್ದಾರೆ.

ಶನಿವಾರದಂದು (ಆಗಸ್ಟ್ 8, 2020) ಎದೆನೋವು ಮತ್ತು ಉಸಿರಾಟದ ತೊಂದರೆಯಿಂದಾಗಿ ಬಾಲಿವುಡ್‌ನ ಬಾಬಾ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಕೊರೊನಾ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.