Friday, November 22, 2024
ಸುದ್ದಿ

ಪ್ರಗತಿ ಎಸ್.ಎಸ್.ಎಲ್.ಸಿ ಮಿಷನ್-100 Online/Offline 2019-20ನೇ ಬ್ಯಾಚ್‍ಗೆ 97.27% ಫಲಿತಾಂಶ-ಕಹಳೆ ನ್ಯೂಸ್

ಪುತ್ತೂರು: ತನ್ನ ವಿವಿಧ ಮಾದರಿಯ ವೈಶಿಷ್ಟ್ಯಗಳ ಮೂಲಕ ಛಾಪನ್ನು ಮೂಡಿಸಿ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ) ಇದರ ಅಧೀನಕ್ಕೆ ಒಳಪಟ್ಟಿರುವ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ಗೆ 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಿಷನ್-100 ಬ್ಯಾಚ್‍ಗೆ 97.27% ದಾಖಲೆಯ ಫಲಿತಾಂಶ ಹೊರಹೊಮ್ಮಿದೆ.

ಅಕ್ಟೋಬರ್ ತಿಂಗಳಿನಿಂದ ಪ್ರಾರಂಭಗೊಂಡ ಈ ತರಗತಿಯು ದ.ಕ, ಉಡುಪಿ, ಕೊಡಗು ಹಾಗೂ ಶಿವಮೊಗ್ಗ ಅನೇಕ ಜಿಲ್ಲೆಯ ಶಾಲೆಗಳಿಂದ ವಿದ್ಯಾರ್ಥಿಗಳು ಈ ತರಗತಿಯ ಸದುಪಯೋಗಪಡೆದುಕೊಂಡಿದ್ದು, ಮಿಷನ್-100 ಬ್ಯಾಚ್‍ಗೆ ಉತ್ತಮ ಫಲಿತಾಂಶ ಬಂದಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಮಿಷನ್ 100 ಔಜಿಜಿಟiಟಿe ಬ್ಯಾಚ್‍ನಲ್ಲಿ ಶ್ರೀಶಾ ಕುಮಾರ್ (588), ಜಯಶ್ರೀ (562),ಹಾನೀಯಾ ಅಸೀಯಾ (556), ಮಹಮ್ಮದ್ ಉಯಿಸಮ್ (555), ನಿದಾ ಫಾತೀಮಾ (549), ಶರನ್ (532), ಅರಾಫತ್ ಅಲಿ(527), ಸಂಜನ್ ಕುಮಾರ್ (521), ಮಹಮ್ಮದ್ ಆಸೀಫ್(513), ನಫೀಸ ಶೀಫಾ(509), ಧೀರಜ್ ಕುಮಾರ್(507) ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಮಾರ್ಚ್‍ನ ಲಾಕ್‍ಡೌನ್ ನಂತರವೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಸ್ಥೆಯ ವತಿಯಿಂದ ಆನ್‍ಲೈನ್ ತರಗತಿಗಳನ್ನು ಏರ್ಪಡಿಸಿದ್ದು, ರಾಜ್ಯದ ಹಲವಾರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದಿದ್ದಾರೆ.

ಆನ್‍ಲೈನ್ ತರಗತಿಗೆ ರಾಜ್ಯದ ಹಲವಡೆಯಿಂದ ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಿದ್ದು, ಉತ್ತಮ ಫಲಿತಾಂಶವನ್ನು ಪಡೆದಿರುತ್ತಾರೆ.ಮಿಷನ್ 100 ಔಟಿಟiಟಿe ಬ್ಯಾಚ್‍ನಲ್ಲಿ ಶಾಲಿನ್ ಮಾರ್ಟಿಸ್(603), ಅನುಶ್ರೀ(602), ವೈಭವಿ ಕೆ(599), ಸಾತ್ವಿಕ್ (579), ವಿಧತ್ರಿ(573), ಕವನ(551), ರೂಪಶ್ರೀ(509) ಉತ್ತಮ ಅಂಕಗಳನ್ನು ಪಡೆದಿರುತ್ತಾರೆ.

 

ಮಿಷನ್ 100 ಬ್ಯಾಚ್‍ನ ಒಟ್ಟಾರೆ 220 ವಿದ್ಯಾರ್ಥಿಗಳಲ್ಲಿ A+ 6 , A 77, B+82, B 30, C+ 19 ಗ್ರೇಡ್‍ಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ.

ವಿದ್ಯಾರ್ಥಿಗಳೊಂದಿಗೆ ಶಾಸಕರ ಸಂವಾದ: ಆನ್‍ಲೈನ್ ತರಗತಿಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುತ್ತೂರು ಶಾಸಕರಾದ ಶ್ರೀಯುತ ಸಂಜೀವ ಮಠಂದೂರುರವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಲಾಕ್‍ಡೌನ್‍ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಗತಿ ವಿದ್ಯಾಸಂಸ್ಥೆಯು ಇಟ್ಟಂತಹ ದಿಟ್ಟ ಹೆಜ್ಜೆ ಅಭಿನಂದನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದರು.

ಲಾಕ್‍ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಆನ್‍ಲೈನ್ ಮೂಲಕ ಪುನರ್ ಮನನ ತರಗತಿಗೆ ಸಂಪೂರ್ಣ ಸಹಕಾರ ನೀಡಿದ ಶಾಸಕರಿಗೆ ಧನ್ಯವಾದಗಳನ್ನು ತಿಳಿಸುತ್ತಾ, ತೇರ್ಗಡೆಹೊಂದಿದ ಎಲ್ಲಾ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಪ್ರಗತಿ ಸಂಸ್ಥೆಯ ಗೋಕುಲ್‍ನಾಥ್ ದಂಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ಹೊಂದಿದ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಮರುಪರೀಕ್ಷೆಗೆ ತಯಾರಿ ತರಗತಿಗಳು ಪ್ರಾರಂಭವಾಗಲಿದ್ದು, ಅನುತ್ತೀರ್ಣ ವಿದ್ಯಾರ್ಥಿಗಳು 9900109490 ಅಥವಾ
9448536143 ನ್ನು ಸಂಪರ್ಕಿಸಬಹುದಾಗಿದೆ.