Recent Posts

Sunday, January 19, 2025
ರಾಜಕೀಯರಾಜ್ಯಸುದ್ದಿ

‘ಎಲ್ಲವನ್ನೂ ಮಾಧ್ಯಮಗಳು ಮುಂದೆ ಹೇಳಲು ಬರಲ್ಲ ಮುಂದೊಂದು ದಿನ ಹೇಳುತ್ತೇನೆ- ಗೃಹ ಸಚಿವ ಬಸವರಾಜ ಬೊಮ್ಮಾಯಿ-ಕಹಳೆ ನ್ಯೂಸ್

ಬೆಂಗಳೂರು: ಮೊನ್ನೆ ನಡೆದ ಗಲಭೆ, ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಮೂರು ಜನ ಅಸುನೀಗಿದ್ದರು. ನಿನ್ಮೆ ಇಡೀ ದಿನ ಕೆ.ಜೆ ಹಳ್ಳಿ, ಡಿ.ಜಿ ಹಳ್ಳಿ ಓಡಾಡಿ ಬಂದಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಹೊಸ ಹೊಸ ವಿಚಾರ ಬೆಳಕಿಗೆ ಬರುತ್ತಿವೆ. ಎಲ್ಲವನ್ನೂ ಮಾಧ್ಯಮಗಳು ಮುಂದೆ ಹೇಳಲು ಬರಲ್ಲ, ಮುಂದೆ ಒಂದು ದಿನ ಹೇಳುತ್ತೇನೆ. ಮುಖ್ಯವಾಗಿ ಎಸ್​ಡಿಪಿಐ ಪಾತ್ರ ಈ ಗಲಭೆ ಹಿಂದೆ ಇದೆ ಎಂಬುದು ಬೆಳಕಿಗೆ ಬರುತ್ತಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಜಮೀರ್ ಹೇಳಿಕೆಯಿಂದ ಅವರು ಯಾರ ಪರವಾಗಿ ಇದ್ದೇವೆ ಎಂಬುದು ಗೊತ್ತಾಗುತ್ತದೆ. ಅವರ ಹೇಳಿಕೆಗೆ ಅವರೇ ಜವಾಬ್ದಾರಿ ಆಗುತ್ತಾರೆ. ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ವಸೂಲಿ ಬಗ್ಗೆ ಸುಪ್ರೀಂ ತೀರ್ಮಾನದಂತೆ ಕ್ರಮವಹಿಸಿದ್ದೇವೆ. ಮಂಗಳೂರು ಮೈಸೂರು ಸೇರಿ ಎಲ್ಲಾ ಕಡೆಗಳ ಪ್ರಕರಣಗಳಲ್ಲಿನ ಎಸ್​ಡಿಪಿಐ ಪಾತ್ರದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಸಮಗ್ರ ಮಾಹಿತಿ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲು ನಾವು ಸಿದ್ಧವಾಗಿದ್ದೇವೆ ಎಂದು ಅವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ನಿನ್ನೆ ಇಡೀ ದಿನ ಎರಡು ಪ್ರದೇಶ ಶಾಂತವಾಗಿದೆ. ಗಲಭೆ ಹಿಂದಿರುವ ವಿಚಾರದಲ್ಲಿ ನಾನಾ ವ್ಯಾಖ್ಯಾನ ಆಗುತ್ತಿದೆ. ತನಿಖೆ ವೇಳೆ ಹಲವು ಹೊಸ ಹೊಸ ವಿಚಾರಗಳು ಬರ್ತಿವೆ. ಸದ್ಯಕ್ಕೆ ಮುಖ್ಯವಾಗಿ ಎಸ್​ಡಿಪಿಐ ಪಾತ್ರ ಬೆಳಕಿಗೆ ಬರ್ತಾ ಇದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಈಗಾಗಲೇ ಎಸ್​ಡಿಪಿಐ ಕೆಲವು ಪದಾಧಿಕಾರಿಗಳನ್ನು ಬಂಧಿಸಿದ್ದೇವೆ. ಅವರ ಪಾತ್ರ ಸಂಪುರ್ಣವಾಗಿ ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಈ ಪ್ರಕರಣದ ಜೊತೆ ಹಿಂದೆ ನಡೆದಿರುವ ಘಟನೆಗಳ ಸಂಬಂಧಗಳನ್ನು ಕೂಡ ತನಿಖೆ ನಡೆಸುತ್ತೇವೆ. ಕೆಲವು ವೀಡಿಯೋಗಳಲ್ಲಿ ಅಕ್ಕಪಕ್ಕದ ಪ್ರದೇಶಗಳಿಂದ ಎಸ್​ಡಿಪಿಐ ಕಾರ್ಯಕರ್ತರು ಬಂದಿರೋದು ಬೆಳಕಿಗೆ ಬಂದಿದೆ. ಪೊಲೀಸರು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ರಾಜ್ಯದ ಇತರ ಕಡೆ ಶಾಂತಿ ಕಾಪಾಡಬೇಕು, ಜನ ಸಹಕರಿಸಬೇಕು ಎಂದು ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.