ವೆಜ್ ಆಮ್ಲೆಟ್ – ಅಡುಗೆ ಮನೆ
ಬೇಕಾಗುವ ಪದಾರ್ಥಗಳು
- ಕಡಲೆ ಹಿಟ್ಟು – 1 ಬಟ್ಟಲು
- ಓಂ ಕಾಳು – ಕಾಲು ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಅರಿಶಿಣದ ಪುಡಿ – ಚಿಟಿಕೆಯಷ್ಟು
- ಈರುಳ್ಳಿ – ಸಣ್ಣಗೆ ಹೆಚ್ಚಿದ್ದು (2)
- ಟೊಮೆಟೋ – ಸಣ್ಣಗೆ ಹೆಚ್ಚಿದ್ದು (1)
- ಹಸಿಮೆಣಸಿನ ಕಾಯಿ – ಸಣ್ಣಗೆ ಹೆಚ್ಚಿದ್ದು (1-2)
- ಕೊತ್ತಂಬರಿ ಸೊಪ್ಪು – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ಶುಂಠಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ಎಣ್ಣೆ -ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ…
- ಮೊದಲು ಪಾತ್ರೆಗೆ ಕಡಲೆಹಿಟ್ಟು, ಅರಿಶಿಣ, ಓಂಕಾಳು, ಉಪ್ಪು ಹಾಗೂ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ 30 ನಿಮಿಷಗಳ ಕಾಲ ನೆನೆಯಲು ಬಿಡಬೇಕು.
- ಬಳಿಕ ಈ ಮಿಶ್ರಣಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳು, ಶುಂಠಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ, ಟೊಮೆಟೋ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ಒಲೆಯ ಮೇಲೆ ಪ್ಯಾನ್ ಇಟ್ಟು ಹಿಟ್ಟನ್ನು ದೋಸೆಯಂತೆ ಹಾಕಿ. ಬೇಯಲು ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ, ರುಚಿಕರವಾದ ವೆಜ್ ಆಮ್ಲೆಟ್ ಸವಿಯಲು ಸಿದ್ಧ.