Recent Posts

Sunday, January 19, 2025
ರಾಜ್ಯಸುದ್ದಿ

ಶೃಂಗೇರಿಯ ಶಂಕರಾಚಾರ್ಯರ ಪ್ರತಿಮೆ ಮೇಲೆ ಎಸ್‌‌ಡಿಪಿಐ ಧ್ವಜ ; ಆರೋಪಿ ಅರೆಸ್ಟ್‌‌ – ಕಹಳೆ ನ್ಯೂಸ್

ಚಿಕ್ಕಮಗಳೂರು, ಆ 14 : ಶೃಂಗೇರಿಯ ಶಂಕರಾಚಾರ್ಯ ಪ್ರತಿಮೆಯ ಮೇಲೆ ಎಸ್‌‌ಡಿಪಿಐ ಬಾವುಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮಿಲಿಂದಾ ಅಲಿಯಾಸ್ ಮಿಲ್ಲಿ ಎನ್ನಲಾಗಿದೆ. ಕಳ್ಳತನದ ಪ್ರಕರಣವೊಂದರಲ್ಲಿ ವಿಚಾರಣೆ ಎದುರಿಸುತ್ತಿದ್ದ ಈತ ಪೊಲೀಸರ ಮೇಲಿನ ದ್ವೇಷದಿಂದ ಈ ರೀತಿಯಾದ ಕೃತ್ಯವೆಸಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕೃತ್ಯವು ಸಿಸಿಟಿವಿ ದೃಶ್ಯದಿಂದ ಬಯಾಲಾಗಿದೆ. ಶಂಕರಾಚಾರ್ಯರ ಪ್ರತಿಮೆಯ ಮೇಲೆ ಬಾವುಟ ಹಾಕಿ ಅಶಾಂತಿ ಮೂಡಿಸುವ ಯತ್ನ ಮಾಡಿದ್ದು, ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಅವರು ಪ್ರತಿಕ್ರಿಯಿಸಿದ್ದು, ಆರೋಪಿಯು ಕುಡಿದ ಮತ್ತಿನಲ್ಲಿ ಈ ಕೃತ್ಯವೆಸಗಿದ್ದಾನೆ. ಆರೋಪಿಯು ಯಾವುದೇ ಸಂಘಟನೆ ಅಥವಾ ಪಕ್ಷಕ್ಕೆ ಸೇರಿದವನಲ್ಲ. ಇದು ಪೂರ್ವ ನಿಯೋಜಿತ ಕೃತ್ಯವಲ್ಲ. ತನಿಖೆಯ ಸಂದರ್ಭ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಿದರು.