Recent Posts

Sunday, January 19, 2025
ಬೆಳ್ತಂಗಡಿ

ಕೊಕ್ಕಡ ಗ್ರಾಮದ ಅಡೈ ಸರಕಾರಿ ಅರಣ್ಯ ಪ್ರದೇಶದಲ್ಲಿ ಹಣವನ್ನು ಪಣವಾಗಿ ಇಟ್ಟುಕೊಂಡು ಉಲಾಯಿ-ಪಿದಾಯಿ ಇಸ್ಪಿಟ್ ಜುಗಾರಿ ಆಟ 14 ಜನ ಅಂದರ್-ಕಹಳೆ ನ್ಯೂಸ್

ದಿನಾಂಕ 11-07-2020 ರಂದು 00.30 ಗಂಟೆಗೆ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಅಡೈ ಸರಕಾರಿ ಅರಣ್ಯ ಪ್ರದೇಶದಲ್ಲಿ ಹಣವನ್ನು ಪಣವಾಗಿ ಇಟ್ಟುಕೊಂಡು ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ರಾತ್ರಿ ಸುಮಾರು 01.30 ಗಂಟೆ ಸಮಯಕ್ಕೆ ಕೊಕ್ಕಡ ಗ್ರಾಮದ ಅಡೈ ಸರಕಾರಿ ಅರಣ್ಯ ಪ್ರದೇಶ ತಲುಪಿ ನೋಡಿದಾಗ ಅರಣ್ಯ ಪ್ರದೇಶದಲ್ಲಿ ಟರ್ಪಾಲ್‌ನ್ನು ಕಾಡು ಮರದ ಕೊಂಬೆಗೆ ಕಟ್ಟಿ ನೆಲದ ಮೇಲೆ ಪ್ಲಾಸ್ಟಿಕ್ ಹಾಸಿ ಜನರು ಸುತ್ತಲೂ ಕುಳಿತು ಕೊಂಡು ಕ್ಯಾಂಡಲ್ ಬೆಳಕಿನ ಸಹಾಯದಿಂದ ಜುಗಾರಿ ಆಟ ಆಡುತ್ತಿರುವುದಾಗಿ ಕಂಡ ಬಂದ ಮೇರೆಗೆ ಹತ್ತಿರಕ್ಕೆ ಸಮವಸ್ತ್ರದಲ್ಲಿ ಪೊಲೀಸ್ ರವರನ್ನು ಕಂಡಾಗ ಅವರು ಕುಳಿತಲ್ಲಿಂದ ಓಡಿ ಹೋಗುತ್ತಿದ್ದವರನ್ನು ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಪವನ್ ಕುಮಾರ್ ಅವರ ಸೂಕ್ಷ್ಮ ಕಾರ್ಯಾಚರಣೆ ಯಲ್ಲಿ   1) ಸುಧಾಕರ(42) ತಂದೆ: ಪದ್ಮಯ್ಯ ನಾಯ್ಕ್ 2) ಅಬ್ದುಲ್ ಖಾದರ್(29) ತಂದೆ: ಇಸ್ಮಾಯಿಲ್ 3) ಸುಬ್ರಾಯ ಗೌಡ(55) ತಂದೆ: ಅಣ್ಣು ಗೌಡ 4) ಅಬ್ದುಲ್ ಲತೀಫ್(43) ತಂದೆ: ಜಿ.ಎಂ ಅಬ್ದುಲ್ಲ ರವರು ವಶಕ್ಕೆ ಪಡೆದುಕೊಂಡು ಅವರನ್ನು ವಿಚಾರಿಸಲಾಗಿ ಓಡಿ ತಪ್ಪಿಸಿಕೊಂಡವರ ಹೆಸರು 5) ರತ್ನಾಕರ 6) ಫಾರೂಕ್ ಉಪ್ಪಿನಂಗಡಿ 7) ಸಾದೀಕ್ 8) ಮಹೇಶ ಪೊಟ್ಲಡ್ಕ 9) ಅಬ್ಬುಂಞ 10) ರೋಹಿತ್ ಆಲಂಕಾರು 11) ರಾಜು 12) ಅಶ್ವಥ್ 13) ಭುವನೇಶ್ವರ್ ಕಳಂಜ 14) ರೋಹಿತ್ ಕಳಂಜ  14 ಜನ ಅಂದರ್  ನಂತರ ವಿಚಾರಿಸಲಾಗಿ ಉಲಾಯಿ-ಪಿದಾಯಿ ಇಸ್ಪಿಟ್ ಜುಗಾರಿ ಆಟ ಆಡುತ್ತಿರುವುದಾಗಿ ತಿಳಿಸಿದ್ದು, ಆರೋಪಿಗಳ ವಶದಿಂದ ಜುಗಾರಿ ಆಟಕ್ಕೆ ಉಪಯೋಗಿಸಿದ ರೂಪಾಯಿ 6,185/- ನಗದು, 52 ಇಸ್ಪೀಟ್ ಎಲೆ, ಮತ್ತು ಮತ್ತು ನಾಲ್ಕು ತುಂಡು ಕ್ಯಾಂಡಲ್ ಮತ್ತು ಅಡಿಗೆ ಹಾಸಲು ಬಳಸಿದ ಒಂದು ಪ್ಲಾಸ್ಟಿಕ್ ಸಾಮಾಗ್ರಿ 3) ಮಳೆನೀರು ಬೀಳದಂತೆ ಕಟ್ಟಿದ ಪ್ಲಾಸ್ಟಿಕ್ ಟರ್ಪಾಲ್ -1 4) ಕೆಎ-04-ಎಂಜೆ-1755 ನೇ ನಂಬ್ರದ ಕಾರು ಇದರ ಅಂದಾಜು ಮೌಲ್ಯ 1,50,000/-ರೂ ಆಗಬಹುದು.

ಜಾಹೀರಾತು

ಜಾಹೀರಾತು
ಜಾಹೀರಾತು