ಬೆಳ್ತಂಗಡಿ :
ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘ (ರಿ), ಲ್ಯಾಂಪ್ಸ್ ಸೊಸೈಟಿ ಹಾಗೂ ತೋಟಗಾರಿಕೆ ಇಲಾಖೆ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಆಸರೆ ಯೋಜನೆಯಡಿಯಲ್ಲಿ ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ ಹಾಗೂ ಉಚಿತ ಸಸಿ ವಿತರಣಾ ಕಾರ್ಯಕ್ರಮ ಭಾರತೀಯ ಜನತಾ ಪಕ್ಷದ ಪಂಡಿತ್ ದೀನದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ಕಾರ್ಯಕ್ರಮ ಇಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ನಾಯಕ್, ಶಾಸಕರು ಕರ್ನಾಟಕ ವಿಧಾನ ಪರಿಷತ್, ಲಿಂಗಪ್ಪ ನಾಯಕ್, ಅಧ್ಯಕ್ಷರು ಲ್ಯಾಂಪ್ಸ್ ಸೊಸೈಟಿ ಬೆಳ್ತಂಗಡಿ, ಶ್ರೀ ಚಂದ್ರಶೇಖರ, ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಬೆಳ್ತಂಗಡಿ, ಸಂಜೀವ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಬೆಳ್ತಂಗಡಿ, ಹಾಗೂ ನೀನಾ ಕುಮಾರ್ ಕಾರ್ಯನಿರ್ವಾಹಣಾಧಿಕಾರಿ ಲ್ಯಾಂಪ್ಸ್ ಸೊಸೈಟಿ ಬೆಳ್ತಂಗಡಿ ಮೊದಲಾದವ್ರು ಉಪಸ್ಥಿತರಿದ್ದರು.