Sunday, January 19, 2025
ಬೆಳ್ತಂಗಡಿ

ತುಳುನಾಡು ಓಕ್ಕೂಟ ಕೇಂದ್ರ ಸಮಿತಿಗೆ ಆಯ್ಕೆಯಾದ ಶೇಖರ್ ಗೌಡತ್ತಿಗೆ ಹಾಗೂ ವಿನ್ಸೆಂಟ್ ಲೊಬೋ ಹಿರಿಯಾಜೆ- ಕಹಳೆ ನ್ಯೂಸ್

ಬೆಳ್ತಂಗಡಿ :
ತುಳುನಾಡು ಓಕ್ಕೂಟ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಶೇಖರ್ ಗೌಡತ್ತಿಗೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ವಿನ್ಸೆಂಟ್ ಲೊಬೋ ಹಿರಿಯಾಜೆ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾದ ಶೈಲೇಶ್ ಆರ್.ಜೆ ಮಾತನಾಡಿ “೨೦೧೩ರಲ್ಲಿ ಪ್ರಾರಂಭಗೊ0ಡ ನಮ್ಮ ಸಂಘಟನೆ ತುಳುನಾಡಿನ ಜನರ ಅಚಾರ-ವಿಚಾರ ಹಾಗೂ ತುಳು ಭಾಷೆಯನ್ನು ಉಳಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ, ತುಳುವರ ನೋವು ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಿದೆ ಜೊತೆ ಜೊತೆಗೆ ಎತ್ತಿನ ಹೊಳೆ ಯೋಜನೆ, ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಟ ಹಾಗೂ ತುಳು ಭಾಷೆಯನ್ನು ಎತ್ತಿ ಹಿಡಿಯುವಲ್ಲಿ ತುಳುನಾಡು ಒಕ್ಕೂಟದ ಕೊಡುಗೆ ಅಪಾರ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇ0ದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ಸ್ವೀಕರಿಸಿ ಮಾತನಾಡಿದ ಶೇಖರ್ ಗೌಡತ್ತಿಗೆ ‘’ಬಿತ್ತಿದ ಬೀಜ ಇಂದು ಮೊಳಕೆಯೊಡೆಯುತ್ತಿದೆ, ಇದನ್ನು ಸಂರಕ್ಷಣೆ ಮಾಡುವುದು ನನ್ನ ಹೊಣೆ , ಪ್ರತಿಯೊಬ್ಬ ತುಳುವರು ಒಗ್ಗಟ್ಟಾಗಿ ತುಳುಭಾಷೆ, ಸಂಸ್ಕೃತಿ ಹಾಗೂ ತುಳುರಾಜ್ಯವನ್ನು ಒಂದುಗೂಡಿಸಲು ಪಣತೊಡೋಣ ಎಂದು ತುಳುವರಲ್ಲಿ ಮನವಿ ಮಾಡಿದರು.
.

ಜಾಹೀರಾತು
ಜಾಹೀರಾತು
ಜಾಹೀರಾತು