ಕಡಬ : ಕೊಕ್ಕಡ ಸಂತ ಫ್ರಾನ್ಸಿಸ್ ವಿದ್ಯಾ ಸಂಸ್ಥೆಗೆ ಸೇರಿದ ಇತರ ಸಂಸ್ಥೆಗಳು ಕೋವಿಡ್ 19 ರಿಂದ ಸಿಲ್ ಡೌನ್ ಆಗಿದ್ದು.ಇಲ್ಲಿ ಇರುವ ಎಲ್ಲಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿರುವುದರಿಂದ 17.8 2020 ರಂದು ಸೀಲ್ ಡೌನ್ ತೆರವುಗೊಳಿಸಲಾಗಿದೆ.
ಈ ರೋಗದ ಬಗ್ಗೆ ಯಾರು ಹೆದರುವ ಅವಶ್ಯಕತೆ ಇಲ್ಲಾ ಎಚ್ಚರ ದಿಂದ ಇದ್ದು ಆರೋಗ್ಯ ಇಲಾಖೆ ಮತ್ತು ಸರಕಾರ ನೀಡುವ ನಿರ್ದೇಶನಗಳನ್ನು ಪಾಲಿಸಿದರೆ ಈ ರೋಗದಿಂದ ದೂರವಿರಲು ಸಾಧ್ಯ ಎಂದು ಸಂಸ್ಥೆಯ ಸಂಚಾಲಕರಾಗಿರುವ ಫಾ. ರೋಯಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕೊಕ್ಕಡ ಮತ್ತು ನೆಲ್ಯಾಡಿ ಯ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದಾಧಿಕಾರಿಗಳ, ಆಶಾ ಕಾರ್ಯ ಕರ್ತೆಯರ, ಹಾಗು ಇತರ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನೆಲ್ಯಾಡಿ ಕೋವಿಡ್ 19 ಟಾಸ್ಕ್ ಫೋರ್ಸ್ ತಂಡದ ಸದಸ್ಯರು, ಫಾ. ಆದರ್ಶ್ ಜೋಸೆಫ್ ನೇತೃತ್ವದಲ್ಲಿ ಸಂಸ್ಥೆಯನ್ನು ಮತ್ತು ಅದರ ವಠಾರ ವನ್ನು ಸ್ಯಾನಿಟೈಜ್ ಮಾಡುವುದರ ಮೂಲಕ ಸ್ವಚ್ಛಗೊಳಿಸಲಾಗಿದ್ದು, ಸಂತ ಫ್ರಾನ್ಸಿಸ್ ವಿದ್ಯಾ ಸಂಸ್ಥೆಯ 2019 -20 ಸಾಲಿನ SSLC ವಿದ್ಯಾರ್ಥಿಗಳು ಸಂಸ್ಥೆಗೆ ಶೇಕಡಾ 100 ಫಲಿತಂಶಗಳಿಸಿದ್ದು ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಅಧ್ಯಾಪಕರಿಗೆ ಅಭಿನಂದನೆಗಳನ್ನು ತಿಳಿಸಿದರು.
ಈಗಾಗಲೇ ಮಕ್ಕಳಿಗೆ ಆನ್ಲೈನ್ ತರಗತಿಗಳು ಪ್ರಾರಂಭಿಸಿದ್ದು,LKG ಯಿಂದ 9 ನೇ ತರಗತಿಯ ವರಗೆ 24-8-2020 ರಂದು ಧಾಖಲಾತಿಗಳು ಪ್ರಾರಂಭವಾಗಲಿದೆ ಮತ್ತು ಶಾಲಾ ಕಚೇರಿಗಳು ಅವತಿನಿಂದಲೇ ಪುನರಾರಂಭ ಗೊಳ್ಳಲಿದೆ ಎಂದು ತಿಳಿಸಿರುತ್ತಾರೆ.