Friday, November 22, 2024
ಸುದ್ದಿ

ಮಂಗಳೂರಿನ ಪಂಪ್’ವೆಲ್ ಲಾಡ್ಜ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ; ಪುತ್ತೂರಿನ ಇಬ್ಬರ ಬಂಧನ – ಮೂವರು ಯುವತಿಯರ ರಕ್ಷಣೆ – ಕಹಳೆ ನ್ಯೂಸ್

ಮಂಗಳೂರು, ಆಗಸ್ಟ್ 21: ನಗರದ ಪಂಪ್ ವೆಲ್ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಲಾಡ್ಜ್ ಸಿಬ್ಬಂದಿ ಹಾಗೂ ಬ್ರೋಕರ್ ನ್ನು ಪೊಲೀಸರು ಬಂಧಿಸಿ, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಆಗಸ್ಟ್ 20ರ ಗುರುವಾರ ಈ ದಾಳಿ ನಡೆದಿದೆ.

ಕಬಕ ಸಮೀಪದ ಕಡಂದಲೆ ನಿವಾಸಿ ಹರೀಶ್ ಶೆಟ್ಟಿ (45), ಪುತ್ತೂರು ತಾಲೂಕು ಬೊಳುವಾರು ನಿವಾಸಿ ಸಾಗರ್ (40) ಬಂಧಿತ ಆರೋಪಿಗಳು. ಲಾಡ್ಜ್ ನಲ್ಲಿ ಸೆಕ್ಸ್ ರಾಕೆಟ್ ಸಕ್ರಿಯವಾಗಿದೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ಈ ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹರೀಶ್ ಶೆಟ್ಟಿ ಲಾಡ್ಜ್ ನ ಉದ್ಯೋಗಿಯಾಗಿದ್ದರೆ, ಸಾಗರ್ ಪಿಂಪ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಠಾಣೆ, ನಗರ ಅಪರಾಧ ವಿಭಾಗದ ಸಿಬ್ಬಂದಿ ಹಾಗೂ ನಗರದ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದರು. ಅಲ್ಲದೆ, ದಂಧೆಯ ಸ್ಥಳದಲ್ಲಿದ್ದ 3 ಯುವತಿಯರನ್ನು ರಕ್ಷಿಸಿದ್ದಾರೆ. ಈ ಕುರಿತು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು