Sunday, January 19, 2025
ಸುದ್ದಿ

ಪುತ್ತೂರಿನ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಬರುವ ಕಾಲೇಜು ಹುಡುಗಿಯರು, ಚಂದದ ಹೆಣ್ಣುಮಕ್ಕಳೇ ಇವನ ಟಾರ್ಗೆಟ್..! ಯುತಿಯರೇ, ಪೋಷಕರೇ, ಹುಷಾರ್ !!ಯಾರಿವನು ಕಾಮಣ್ಣ ನಿರ್ವಾಹಕ.!? – ಕಹಳೆ ನ್ಯೂಸ್

ಪುತ್ತೂರು : ಸರಕಾರಿ ಬಸ್ಸ್ ನಿರ್ವಾಹಕ ಮಧುಚಂದ್ರ ಖೃತ್ಯ ಫೇಸ್ ಬುಕ್, ವಾಟ್ಸ್ ಯಾಪ್ ಬಲ್ಲಿ ವೈರಲ್ ಆಗುತ್ತಿದೆ. ಏನದು ಘಟನೆ ? ಯಾವ ವಿಷಯ ಅಂತೀರಾ ಈ ಮಾಹಿತಿ ಸಂಪೂರ್ಣ ಓದಿ …

ಕೆಎಸ್ಆರ್.ಟಿ.ಸಿ. ಡಿಪೋದಿಂದ ಹೊರಡುವ ಕೆಎ ೨೧. ಎಫ್ ೦೧೧೬ ಬಸ್ಸಿನ ನಿರ್ವಾಹಕ ಹಾಸನದ ಮಧುಚಂದ್ರ (ಆತನೇ ತನ್ನ ಪರಿಚಯ ಹೇಳಿಕೊಂಡಿದ್ದು) ಎಂಬಾತ ಬಸ್ಸಿನಲ್ಲಿ ಬರುವ ಕಾಲೇಜು ಹುಡುಗಿಯರನ್ನು ಕಾಮುಕ ದೃಷ್ಟಿಯಿಂದ ನೋಡುವುದಲ್ಲದೇ, ಬಸ್ಸಿನಲ್ಲಿ ಪ್ರಯಾಣಿಸುವ ಚೆಂದದ ಹುಡುಗಿಯರು, ಮಹಿಳೆಯರನ್ನು ಮಾತನಾಡಿಸುತ್ತಾ ಪರಿಚಯ ಮಾಡಿಕೊಳ್ಳುತ್ತಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ಸಂಜೆ ೪.೩೦ ರ ಸುಮಾರಿಗೆ ಪುತ್ತೂರಿನಲ್ಲಿ ಹತ್ತಿದ ಇಬ್ಬರು ಹುಡುಗಿಯರ ಬಸ್ ಪಾಸ್ ತೆಗೆದುಕೊಂಡು ಅವರ ಹೆಸರು ತಿಳಿದು ಹುಡುಗಿಯರು ತನ್ನ ಪರಿಚಯದವರು ಎಂದು ಹೇಳಿಕೊಂಡಿದ್ದಾನೆ. ಆದರೆ ಹುಡುಗಿಯರನ್ನು ಕೇಳಿದಾಗ ಆತನ ವೈಯುಕ್ತಿಕವಾಗಿ ಪರಿಚಯ ಇಲ್ಲ. ಬಸ್ ಪಾಸ್ ನಲ್ಲಿರುವ ಹೆಸರು ತಿಳಿದು ನನ್ನ ಪರಿಚಯದವರು ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಹುಡುಗಿಯರ ಬಳಿ- ಮೊಬೈಲ್ ಇದೆಯಾ? ಚಿಕ್ಕ ಮೊಬೈಲ್ ಇರೋದಾ? ದೊಡ್ಡದು ಇಲ್ವಾ? ನಂಬರ್ ಕೊಡು, ಯಾವ ಕಾಲೇಜು, ಮನೆಯಲ್ಲಿ ಯಾರೆಲ್ಲ ಇದ್ದೀರಾ, ಪೋಷಕರು ಏನು ಉದ್ಯೋಗ ಮಾಡುತ್ತಿದ್ದಾರೆ. ಏನೆಲ್ಲ ಕೃಷಿ ಮಾಡ್ತಿದ್ದೀರಾ. ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದ.
ಇದನ್ನು ಗಮನಿಸಿದ ನಾನು ಮತ್ತು ಸಹ ಪ್ರಯಾಣಿಕ ದಾಮೋದರ ಆಚಾರ್ಯ ಇಬ್ಬರೂ ಸೇರಿ ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡ ನಂತರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಯುವತಿಯರು ಇಲ್ಲವೆ ಅವರ ಮನೆಯವರು ಏನೇ ಮಾಡಿಕೊಂಡಿದ್ದರೂ ಅವರ ವೈಯಕ್ತಿಕ ಮಾಹಿತಿ ನಿರ್ವಾಹಕನಿಗೆ ಯಾಕೆ?
ಇಂತಹ ಕಾಮುಕ ನಿರ್ವಾಹಕರಿಂದ ಕಾಲೇಜು ಯುವತಿಯರ ರಕ್ಷಣೆ ಮಾಡಬೇಕಿದೆ. ಮತ್ತು ಇಂತಹ ಕಾಮುಕರಿಂದ ಯುವತಿಯರು ದೂರ ಇರುವುದು ಒಳಿತು.

ವರದಿ : ಕಹಳೆ ನ್ಯೂಸ್