Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ತೆಂಕಿಲದಲ್ಲಿ ಅಕ್ರಮ ಹುಲಿ ಚರ್ಮ ಮಾರಾಟ ಪ್ರಕರಣ ; ಆರೋಪಿಗಳ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಸುಮಾರು 11 ವರ್ಷಗಳ ಹಿಂದೆ ಪುತ್ತೂರು ನಗರದ ಬೈಪಾಸ್ ತೆಂಕಿಲ ಎಂಬಲ್ಲಿ ಅಕ್ರಮವಾಗಿ ಹುಲಿ ಚರ್ಮವನ್ನು ಮಾರಾಟ ಮಾಡುತ್ತಿದರೆಂದು ಆರೋಪಿಸಲಾದ ಪ್ರಕರಣವೊಂದರಲ್ಲಿ ಆರೋಪಿಗಳಾದ ಅಬೂಬಕ್ಕರ್, ವಿನೋದ್, ಉಮೇಶ್ ಮತ್ತು ಕರಿಂಮ್‍ರವರನ್ನು ಪುತ್ತೂರಿನ ಹಿರಿಯ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಮ್. ನ್ಯಾಯಾಲಯದ ನ್ಯಾಯಧೀಶರಾದ ಶ್ರೀ ಮಂಜುನಾಥ ಎಸ್.ರವರು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದ್ದಾರೆ.

ಮಂಗಳೂರು ವಿಶೇಷ ಪೆÇಲೀಸ್ ಸಂಚಾರಿದಳದ ಪೋಲೀಸ್ ಉಪನಿರೀಕ್ಷಕರಿಗೆ ಪುತ್ತೂರು ತಾಲೂಕು ಈಶ್ವರಮಂಗಲ ಎಂಬಲ್ಲಿಂದ ಆಟೋರಿಕ್ಷಾ ಕೆ.ಎ.21-9102 ನೇದರಲ್ಲಿ ಹುಲಿಚರ್ಮವನ್ನು ಮಾರಾಟ ಮಾಡುತ್ತಿದ್ದಾರೆ, ಪುತ್ತೂರು ನಗರದ ಬೈಪಾಸ್ ರಸ್ತೆ ಕಡೆಗೆ ಬರುವರಿದ್ದಾರೆ ಎಂಬುದಾಗಿ ದೊರೆತ ಖಚಿತ ವರ್ತಮಾನದ ಮೇರೆಗೆ ಪೆÇೀಲೀಸ್ ಉಪನಿರೀಕ್ಷಕರು ತಮ್ಮ ಸಿಬ್ಬಂದಿಯೊಂದೊಗೆ ಪುತ್ತೂರು – ಮಂಗಳೂರು ಬೈಪಾಸ್ ರಸ್ತೆಯಲ್ಲಿ ತೆಂಕಿಲ ಎಂಬಲ್ಲಿ ಶ್ರೀಧರ ಎಂಬುವರ ಅಂಗಡಿ ಎದುರು ಕಚ್ಚಾ ರಸ್ತೆಯಲ್ಲಿ ಆಟೋರಿಕ್ಷಾ ಕೆ.ಎ.21-9102 ನೇಯದನ್ನು ಪತ್ತೆ ಮಾಡಿ ರಿಕ್ಷಾದ ಡಿಕ್ಕಿಯಲ್ಲಿ ಪೆÇಲಿಥಿನ್ ಚೀಲದಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ 3 ಹುಲಿಚರ್ಮಗಳನ್ನು ಇಟ್ಟುಕೊಂಡಿದ್ದನ್ನು ಪತ್ತೆ ಮಾಡಿ ಅದನ್ನು ಮಾರಾಟ ಮಾಡಲು ತಂದಿದ್ದಾರೆ ಎಂದು ಆರೋಪಿಸಿ, ವನ್ಯ Œಜೀವಿ ಸಂರಕ್ಷಣಾ ಅಧಿನಿಯಮ ಕಲಂ 9,39(3)(ಅ)(ಆ),44,49,50,51 ರ ಪ್ರಕಾರ ಮತ್ತು ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆ ಕಲಂ 71(ಅ) ರಡಿ ಪುತ್ತೂರು ನಗರ ಪೆÇೀಲಿಸ್ ಠಾಣೆಯಲ್ಲಿ ನಿವೇದನೆ ನೀಡಿ ಆ ಆಧಾರದಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸಿಕೊಂಡು, ನಂತರ ಸದ್ರಿ ಪ್ರಕರಣದ ಬಗ್ಗೆ ಪುತ್ತೂರು ನಗರ ಪೆÇೀಲಿಸರು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಿರುವಲ್ಲಿ ನ್ಯಾಯಾಲಯವು ಈ ಪ್ರಕರಣವನ್ನು ಕೈಗೆತ್ತಿಕೊಂಡು ಸುಮಾರು 7 ಸಾಕ್ಷಿಗಳನ್ನು ತನಿಖೆ ನಡೆಸಿ ದೂರುದಾರರು ದೂರು ನೀಡುವ ಬಗ್ಗೆ ಸೂಕ್ತ ಕಾನೂನಿನ ಅಂಶಗಳನ್ನು ಪರಿಪಾಲಿಸಿಲ್ಲ, ಹುಲಿ ಚರ್ಮ ಎಂಬ ಬಗ್ಗೆ ಮೇಲ್ನೋಟದ ಪುರಾವೆಯಿಲ್ಲ ಈ ಕಾರಣಕ್ಕಾಗಿ ಪೆÇ್ರೀಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಭೀತುಪಡಿಸಲು ವಿಫಲಗೊಂಡಿದೆ ಎಂದು ತೀರ್ಮಾನಿಸಿ, ಆರೋಪಿಗಳನ್ನು ಬಿಡುಗಡೆಗೊಳಿಸಲು ಪುತ್ತೂರಿನ ಹಿರಿಯ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಮ್. ನ್ಯಾಯಾಲಯವು ಆದೇಶಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ವಿನೋದ್ ಪರ ಕಜೆ ಲಾ ಚೇಂಬರ್ಸ್ ನ ವಕೀಲರಾದ ಶ್ರೀ. ಮಹೇಶ್ ಕಜೆಯವರು ವಾದಿಸಿದ್ದರು, ಅಬೂಬ್ಬಕ್ಕಾರ್ ಪರ ನೂರುಧ್ಧೀನ್ ಸಾಲ್ಮ್‍ರ, ಉಮೇಶ್ ಪರ ದುರ್ಗ ಪ್ರಸದ್, ಕರಿಂಮ್ ಪರ ಕುಮರ್‍ನಾಥ ವಕೀಲರು ವಾದಿಸಿದರು.