Friday, November 22, 2024
ರಾಜಕೀಯರಾಜ್ಯ

ಯಡಿಯೂರಪ್ಪ ನಂತರ ರಾಜ್ಯ ಬಿಜೆಪಿ ನಾಯಕತ್ವ ಯಾರಿಗೆ? ನಳಿನ್ ಕುಮಾರ್ ಕಟೀಲ್ ಏನಾಂತರೆ!- ಕಹಳೆ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಂತರ ರಾಜ್ಯದಲ್ಲಿ ಯಾರು ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂಬುದನ್ನು ಪಕ್ಷ ನಿರ್ಧರಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮದು ವಿಭಿನ್ನ ಪಕ್ಷ, ನಮ್ಮ ನಾಯಕರು ಸುವ್ಯವಸ್ಥಿತವಾಗಿ ಬೆಳೆದಿರುತ್ತಾರೆ ಎಂದು ಸ್ಪಷ್ಟಪಡಿಸಿದ ನಳಿನ್ ಕುಮಾರ್ ಕಟೀಲ್, ರಾಜ್ಯದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಮ್ಮ ನಾಯಕರು, ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ನಾಯಕರು. ಮುಂದೆ ಯಾರು ನಾಯಕತ್ವ ವಹಿಸಬೇಕು ಎಂಬ ಸಂದರ್ಭ ಬಂದಾಗ ಪಕ್ಷ ನಿರ್ಧರಿಸಿದೆ ಆದರೆ, ಯಾವುದೇ ಗೊಂದಲವಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳಿಸಿರುವ ಕಟೀಲ್, ಬಿಜೆಪಿಗೆ ಅಧಿಕಾರ ಬಂದಿಲ್ಲ, ಜನಾದೇಶ ನಮಗೆ ಸಿಕ್ಕಿದೆ. ಮೋದಿ ಪ್ರಧಾನಿ ಎಂಬುದಾಗಿ ಬಿಂಬಿಸುವಾಗ ಸಿದ್ದರಾಮಯ್ಯ, ಗುಜರಾತ್ ಹೊರತುಪಡಿಸಿದಂತೆ ಮೋದಿ ಯಾರಿಗೆ ಗೊತ್ತು ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಈಗ ಮೋದಿ ವಿಶ್ವದಾದ್ಯಂತ ಜನಪ್ರಿಯರಾಗಿದ್ದಾರೆ. ಅಮಿತ್ ಶಾ ಕೂಡಾ ಅದೇ ರೀತಿ ಜನಪ್ರಿಯರಾಗಿದ್ದಾರೆ. ಹಳೆಯ ಮೈಸೂರು ಭಾಗದಲ್ಲಿ ಪಕ್ಷ ನಿಧಾನವಾಗಿ ಪ್ರಭುತ್ವವನ್ನು ಸ್ಥಾಪಿಸುತ್ತಿದೆ. ಮಂಡ್ಯ, ಚಿಕ್ಕಬಳ್ಳಾಪುರವನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ವಿಶ್ವಾಸ ಹೊಂದಿರುವುದಾಗಿ ಹೇಳಿದ ಕಟೀಲ್, ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ 198 ಸ್ಥಾನಗಳ ಪೈಕಿಯಲ್ಲಿ 155 ರಿಂದ 120 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ. ಎಲ್ಲಾ ನಾಲ್ಕು ಪರಿಷತ್ ಸ್ಥಾನಗಳನ್ನೂ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಈ ವರ್ಷ ಪ್ರವಾಹ ಪರಿಸ್ಥಿತಿ, ಹಾಗೂ ಕೋವಿಡ್-19ನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಯಶಸ್ವಿಯಾಗಿರುವುದಾಗಿ ನಳಿನ್ ಕುಮಾರ್ ಕಟೀಲ್ ಹೇಳಿದರು..