Sunday, January 19, 2025
ಕೃಷಿ

ಶ್ರೀನಿವಾಸಪುರ: ರೈತರ ನಿದ್ದೆಗೆಡಿಸಿದ ಅಕಾಲಿಕ ಹೂ -ಕಹಳೆ ನ್ಯೂಸ್

ಶ್ರೀನಿವಾಸಪುರ: ತಾಲ್ಲೂಕಿನ ಕೆಲವು ಕಡೆ ಮಾವಿನ ಮರಗಳಲ್ಲಿ ಅಕಾಲಿಕ ಹೂ ಕಾಣಿಸಿಕೊಂಡಿದೆ. ಮಳೆಗಾಲದಲ್ಲಿ ಕಾಣಿಸಿಕೊಂಡಿರುವ ಹೂ ಬೆಳೆಗಾರರ ನಿದ್ದೆಗೆಡಿಸಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾನ್ಯವಾಗಿ ಮಾವಿನ ಹೂವು ಡಿಸೆಂಬರ್‌ ಕೊನೆ ಅಥವಾ ಜನವರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಈಗ ಮಳೆಗಾಲದಲ್ಲಿ ಕೆಲವು ಗಿಡಗಳಲ್ಲಿ ಹೂ ಬರುತ್ತಿದೆ. ಸಕಾಲದಲ್ಲಿ ಹೂ ಬರದೆ ಹೋದೀತೆಂದು ಹೆದರಿದ ಬೆಳೆಗಾರರು ಅಕಾಲಿಕ ಹೂವನ್ನು ತೀಡಿ ಮಣ್ಣುಪಾಲು ಮಾಡುತ್ತಿದ್ದಾರೆ.

‘ಅಕಾಲಿಕ ಮಾವಿನ ಹೂವಿನ ಬಗ್ಗೆ ಬೆಳೆಗಾರರು ಚಿಂತಿಸಬೇಕಾದ ಅಗತ್ಯವಿಲ್ಲ. ಜೋರು ಮಳೆಯಾದಲ್ಲಿ ಹೂವು ಉದುರಿ ನೆಲ ಕಚ್ಚುತ್ತದೆ’ ಎಂದು ಮಣಿಗಾನಹಳ್ಳಿ ಗ್ರಾಮದ ಮಾವು ಬೆಳೆಗಾರ ಎನ್.ಶ್ರೀರಾಮರೆಡ್ಡಿ ತಿಳಿಸಿದರು.

ಅಲ್ಲಲ್ಲಿ ತೆಳುವಾಗಿ ಹೂ ಬಂದಲ್ಲಿ ಬಿಟ್ಟು ಬಿಡಬಹುದು. ಒತ್ತಾಗಿ ಹಾಗೂ ಹೆಚ್ಚಿನ ಸಂಖ್ಯೆಯ ಮರಗಳಲ್ಲಿ ಹೂ ಬಂದಲ್ಲಿ, ರಕ್ಷಣಾ ಕ್ರಮ ಕೈಗೊಳ್ಳಬಹುದಾಗಿದೆ. ಅಕಾಲಿಕವಾಗಿ ಮಾವಿನ ಹಣ್ಣು ಬಂದಲ್ಲಿ ಒಳ್ಳೆ ಬೆಲೆ ಸಿಗುತ್ತದೆ ಎಂದು ತೋಟಗಾರಿಕಾ ತಜ್ಞರು ತಿಳಿಸಿದರು.

ಮಾವಿನ ಚಿಗುರನ್ನು ಕಾಡುತ್ತಿ
ರುವ ಹುಳು ಬಾಧೆ, ಗಿಡ, ಮರಗಳ ಬೆಳವಣಿಗೆಗೆ ಕಂಟಕವಾಗಿ ಪರಿಣಮಿಸಿದೆ. ‘ಮಾವಿನ ಎಲೆ ತಿನ್ನುವ ಹುಳು ನಿಯಂತ್ರಣಕ್ಕೆ ಲ್ಯಾಮ್ಡಾ ಔಷಧವನ್ನು 1 ಲೀಟರ್ ನೀರಿಗೆ 1 ಮಿ.ಲೀಟರ್‌ನಂತೆ ಸಿಂಪಡಣೆ ಮಾಡಬೇಕು’ ಎಂದು ತೊಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ್‌ ಸಲಹೆ ನೀಡಿದ್ದಾರೆ.