ವಾಷಿಂಗ್ಟನ್, ಆಗಸ್ಟ್ 27: ಚೀನಾದ ಕಿರು ವೀಡಿಯೋ ತಯಾರಿಕಾ ಆಯಪ್ ಟಿಕ್‌ಟಾಕ್ ಆಯಪ್ ನಿಷೇಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ ನಂತರ ಟಿಕ್ ಟಾಕ್ ಮುಖ್ಯಸ್ಥ ಕೆವಿನ್ ಮೇಯರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ದೇಶದ ಭದ್ರತೆಗೆ ಧಕ್ಕೆ ತರುತ್ತದೆ ಎಂಬ ವಿಚಾರವಾಗಿ 45 ದಿನಗಳಲ್ಲಿ ಟಿಕ್‌ಟಾಕ್ ಮಾರುವಂತೆ ವಾರ್ನಿಂಗ್ ಕೊಟ್ಟಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟಿಕ್‌ಟಾಕ್ ಮಾಲೀಕರಾದ ಬೈಟ್‌ಡ್ಯಾನ್ಸ್‌ಗೆ 90 ದಿನಗಳವರೆಗೆ ಮಾರಬೇಖು ಇಲ್ಲ ಬ್ಯಾನ್ ಎಂದು ಎಚ್ಚರಿಕೆ ನೀಡಿದ್ದರು.
ಟ್ರಂಪ್ ಆಡಳಿತದ ವಿರುದ್ಧ ಕಾನೂನು ಸಮರ ಆರಂಭಿಸಿದ ಟಿಕ್‌ಟಾಕ್
ಈಗಾಗಲೇ ಟ್ರಂಪ್ ವಿರುದ್ಧ ನ್ಯಾಯಾಂಗ ಹೋರಾಟ ಮಾಡುವುದಾಗಿ ಟಿಕ್‌ಟಾಕ್ ಮಾಲೀಕರಾದ ಬೈಟ್‌ಡ್ಯಾನ್ಸ್ ಕೂಡ ಹೇಳಿತ್ತು. ಆದರೆ ಚೀನಾದ ವಿಡಿಯೋ ಪ್ಲಾಟ್‌ಫಾರ್ಮ್‌ಗೆ ನೇಮಕಗೊಂಡ ಕೆಲವೇ ತಿಂಗಳುಗಳಲ್ಲಿ ಮಾಜಿ ಡಿಸ್ನಿ ಕಾರ್ಯನಿರ್ವಾಹಕ ಕೆವಿನ್ ಮೇಯರ್ ರಾಜೀನಾಮೆ ನೀಡಿದ್ದಾರೆ.
ಟಿಕ್‌ಟಾಕ್ ಸಿಇಒ ಆಗಿ ನೇಮಕಗೊಳ್ಳುವ ಮೊದಲು, ಮೇಯರ್ ದಿ ವಾಲ್ಟ್ ಡಿಸ್ನಿ ಕಂಪನಿಯ ನೇರ-ಗ್ರಾಹಕ ಮತ್ತು ಅಂತರರಾಷ್ಟ್ರೀಯ ವಿಭಾಗದ ಅಧ್ಯಕ್ಷರಾಗಿದ್ದರು.
ಟಿಕ್ ಟಾಕ್ ಪ್ರಸ್ತುತ ಅಮೆರಿಕಾದಲ್ಲಿ 80 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಏತನ್ಮಧ್ಯೆ, ಮೈಕ್ರೋಸಾಫ್ಟ್ ಈ ಹಿಂದೆ ಬೈಟ್ ಡ್ಯಾನ್ಸ್‌ನಿಂದ ಟಿಕ್‌ಟಾಕ್ ಖರೀದಿಸಲು ಸಿದ್ಧ ಎಂದು ಘೋಷಿಸಿತ್ತು. ಎರಡು ಕಂಪನಿಗಳು ಒಪ್ಪಂದಕ್ಕೆ ಬಂದರೆ, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಟಿಕ್‌ಟಾಕ್‌ನ ಕಾರ್ಯಾಚರಣೆಯನ್ನು ಮೈಕ್ರೋಸಾಫ್ಟ್ ವಹಿಸಿಕೊಳ್ಳಲಿದೆ.