Sunday, January 19, 2025
ಸಿನಿಮಾ

`ಕಡೆ ಮನೆ’ಯಲ್ಲಿ ಚಮಕ್ ಚಮಕ್ ಐಟಂ ಸಾಂಗ್ – ಕಹಳೆ ನ್ಯೂಸ್

Kade-mane

ಬೆಂಗಳೂರು: ಕೀರ್ತನ ಕ್ರಿಯೇಷನ್ಸ್ ಲಾಂಛನದಲ್ಲಿ ನಂದಕುಮಾರ ಎಸ್.ತುಮಕೂರು ನಿರ್ಮಿಸುತ್ತಿರುವ `ಕಡೆ ಮನೆ’ ಚಿತ್ರಕ್ಕೆ ಕಳೆದ ವಾರ ತುಮಕೂರು ಹತ್ತಿರದ ಕೈದಾಳ ಗ್ರಾಮದಲ್ಲಿ ಅದ್ಧೂರಿ ಸೆಟ್‍ನಲ್ಲಿ ಐಟಂ ಸಾಂಗ್ ಶೂಟಿಂಗ್ ನಡೆಯಿತು. ಆಲೀಷಾ ಹಾಗೂ ಸಹ ನರ್ತಕಿಯರು ಅಭಿನಯಿಸಿದ `ಚಮಕ್ ಚಮಕ್ ಶೋಭನಾ’ ಎಂಬ ಐಟಂ ಹಾಡೊಂದನ್ನು ಚಿತ್ರೀಕರಿಸಿಕೊಳ್ಳಲಾಯಿತು. ಈಗಾಗಲೇ ಪ್ರಥಮ ಪ್ರತಿ ಹೊರಬಂದಿದ್ದು ಏಪ್ರಿಲ್ ತಿಂಗಳಲ್ಲಿ ಚಿತ್ರವನ್ನು ತೆರೆಯ ಮೇಲೆ ತರಲು ತಯಾರಿ ನಡೆದಿದೆ.

kade mane item song

ವಿನಯ್ ಕಥೆ ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ, ಮಧುಸೂದನ್ ಶಾಮ್ ಛಾಯಾಗ್ರಹಣ, ರಘುನಾಥ್ ಸಂಕಲನ, ಅರುಣ್ ಕುಮಾರ್ ನೃತ್ಯ ನಿರ್ದೇಶನ, ಅಶೋಕ್ ಸಾಹಸ, ದನಂಜಯ್ ವಿಜಯ್ ಸಂಭಾಷಣೆ, ಲೋಕೇಶ್ ಸಾಹಿತ್ಯವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
Kade maneKade-mane

ಯುವರಾಜ್, ಕಲ್ಪನ, ಬಾಲರಾಜ್‍ವಾಡಿ, ಆಯೇಷ್, ಕೊಡಿರಂಗ, ಬ್ಯಾಂಕ್ ಜನಾರ್ಧನ್, ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡ್ರು, ಮಂಡ್ಯ ಸಿದ್ದು, ವಿಜಯ್, ಇಂದ್ರಜಿತ್, ಗಜ ಮುಂತಾದವರ ತಾರಾಬಳಗವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು