Sunday, January 19, 2025
ಸಿನಿಮಾಸುದ್ದಿ

Breaking News : ತ್ರಿಭಾಷಾ ‘ನಟಿ ಶರ್ಮಿಳಾ ಮಾಂಡ್ರೆ ಪಕ್ಕದಲ್ಲೇ ಕುಳಿತ್ತಿದ್ದ ಬೆಂಗಳೂರಿನ ದೊಡ್ಡ ಡ್ರಗ್ಸ್ ಪೆಡ್ಲರ್’ – ಕಹಳೆ ನ್ಯೂಸ್

ಬೆಂಗಳೂರು: ಕನ್ನಡ ಸಿನಿಮಾರಂಗದ ಹಲವು ನಟ-ನಟಿಯರು ಮತ್ತು ನಿರ್ದೇಶಕರು ಡ್ರಗ್ಸ್​ ಜಾಲದಲ್ಲಿ ಭಾಗಿಯಾಗಿದ್ದಾರೆ. ಈ ಮಾಫಿಯಾದ ಹಿಂದೆ ರಾಜಕಾರಣಿಗಳು, ಮಾಡೆಲ್ ಏಜೆನ್ಸಿಗಳು ಎಲ್ಲರೂ ಭಾಗಿಯಾಗಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಸುದ್ದಿ ಹೊರಬಿದ್ದಿದೆ. ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸುವಂತಿದೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರ ಆರೋಪ.

‘ಲಾಕ್‌ಡೌನ್ ವೇಳೆ ನಟಿ ಶರ್ಮಿಳಾ ಮಾಂಡ್ರೆ ಅವರ ಕಾರು ಅಪಘಾತವಾಗಿತ್ತು. ಆ ಸಂದರ್ಭದಲ್ಲಿ ಅವರ ಜೊತೆ ಆ ಕಾರಿನಲ್ಲಿ ಇದ್ದದ್ದು ಬೆಂಗಳೂರಿನ ದೊಡ್ಡ ಡ್ರಗ್ಸ್ ಪೆಡ್ಲರ್’ ಎಂದು ಪ್ರಶಾಂತ್​ ಸಂಬರಗಿ ಗಂಭೀರ ಆರೋಪ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಗೆದಷ್ಟು ಆಳ ಎಂಬಂತೆ ಸ್ಯಾಂಡಲ್‌ವುಡ್ ಡ್ರಗ್ಸ್‌ ಜಾಲದ ಬೇರು ವ್ಯಾಪಿಸಿಕೊಳ್ಳುತ್ತಲೇ ಇದೆ. ಇತ್ತೀಚಿಗೆ ಮೃತಪಟ್ಟ ಕನ್ನಡದ ಯುವ ನಟನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಲಿಲ್ಲ ಏಕೆ? ಎಂದು ಪ್ರಶ್ನಿಸಿರುವ ಇಂದ್ರಜಿತ್​ ಲಂಕೇಶ್, ಇದರ ಹಿಂದೆ ರಾಜಕೀಯ ನಾಯಕರ ಕೈವಾಡ ಇದೆ ಎಂದಿರುವುದು ಕನ್ನಡ ಚಿತ್ರರಂಗವನ್ನೇ ತಲ್ಲಣಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಕನ್ನಡದ ಪ್ರಖ್ಯಾತ ಯುವನಟಿ ಶರ್ಮಿಳಾ ಮಾಂಡ್ರೆ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮಾಡಿರುವ ಆರೋಪ ಮತ್ತಷ್ಟು ಬೆಚ್ಚಿಬೀಳಿಸಿದೆ. ಶರ್ಮಿಳಾ ಮಾಂಡ್ರೆ ಕಾರ್ ಆ್ಯಕ್ಸಿಡೆಂಟ್ ಆಗಿತ್ತು. ಆಗ ಅವರ ಪಕ್ಕದಲ್ಲಿ ಕುಳಿತ್ತಿದ್ದವನು ದೊಡ್ಡ ಡ್ರಗ್ಸ್ ಪೆಡ್ಲರ್ ಎಂದಿರುವುದು ಸಾಕಷ್ಟು ಚರ್ಚೆಯಾಗುತ್ತಿದೆ.