ಮಂಗಳೂರಲ್ಲಿ 132 ಕೆ.ಜಿ. ಗಾಂಜಾ ವಶ ; ಗಾಂಜಾ ಸಾಗಾಟ ಮಾಡುತ್ತಿದ್ದ ಮೊಹಮ್ಮದ್ ಶಾಹ, ಮೊಯಿದ್ದೀನ್ ಅನ್ಸಾರ್ ಬಂಧನ – ಕಹಳೆ ನ್ಯೂಸ್
ಮಂಗಳೂರು, ಆ. 30 : ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಪಿಕಪ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೆರೆ ಹಿಡಿಯಲಾಗಿದ್ದು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬಂಧಿತರನ್ನು ಮಂಜೇಶ್ವರದ ವರ್ಕಾಡಿ ಗ್ರಾಮದ ಪಾವೂರಿನ ನಿವಾಸಿ ಕಲಂದರ್ ಮೊಹಮ್ಮದ್ ಶಾಹ (35) ಹಾಗೂ ಕಾಸರಗೋಡು ಕುಂಜತ್ತೂರು ಗ್ರಾಮದ ಉದ್ಯಾವರದ ನಿವಾಸಿ ಮೊಯಿದ್ದೀನ್ ಅನ್ಸಾರ್ (29) ಅವರನ್ನು ಬಂಧಿಸಲಾಗಿದೆ.
ಮಂಗಳೂರು ನಗರಕ್ಕೆ ಹಾಗೂ ಕೇರಳ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಪಿಕಪ್ ವಾಹನದಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದವರನ್ನು ಹಾಗೂ ಆರೋಪಿತರ ಬೆಂಗಾವಲು ಕಾರನ್ನು ಪಂಪ್ವೆಲ್ ರಸ್ತೆಯ ತಾರೆ ತೋಟದ ಬಳಿ ವಶಪಡಿಸಿಕೊಳ್ಳುವಲ್ಲಿ ಮಂಗಳೂರು ನಗರದ ಸಿ.ಸಿ.ಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ಯಶಸ್ವಿಯಾಗಿದ್ದು 132 ಕೆ.ಜಿ. ಗಾಂಜಾ. ಮಹೀಂದ್ರ ಬೊಲೆರೊ ಪಿಕಪ್ ವಾಹನ, ಬೆಂಗಾವಲಿದ್ದ ಸ್ವಿಫ್ಟ್ ಕಾರು ಹಾಗೂ ಎರಡು ಮೊಬೈಲ್‌ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಸೊತ್ತುಗಳ ಒಟ್ಟು ಮೊತ್ತ 43 ಲಕ್ಷ ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರದಲ್ಲಿ ಗಾಂಜಾ ಸಾಗಾಟ ಅಥವಾ ಇನ್ನು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಕಾನೂನು ಮತ್ತು ಸುವ್ಯವಸ್ಥೆ ಉಪಪೊಲೀಸ್ ಆಯುಕ್ತರು ಅರುಣಾಂಗ್ಶು ಗಿರಿ, ಮೊಬೈಲ್ ನಂಬರ್ 9480802304, ಅಪರಾಧ ಮತ್ತು ಸಂಚಾರ ಉಪ ಪೊಲೀಸ್ ಆಯುಕ್ತರು ವಿನಯ್ ಎ ಗಾಂವ್‌ಕರ್, ಮೊಬೈಲ್ ನಂಬರ್ 9480802305 ಹಾಗೂ ನಿಸ್ತಂತು ಕೊಠಡಿ ನಂಬರ್ 08242220800 ಗೆ ಮಾಹಿತಿಯನ್ನು ನೀಡಲು ಕೋರಲಾಗಿದೆ.