Recent Posts

Tuesday, November 26, 2024
ಪುತ್ತೂರು

ಪುತ್ತೂರು: ಬನ್ನೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಆಟೋ ರಿಕ್ಷಾ ಚಾಲಕನ ಮೃತದೇಹ ಪತ್ತೆ- ಕಹಳೆ ನ್ಯೂಸ್

ಪುತ್ತೂರು: ಬನ್ನೂರು ನಿರ್ಪಾಜೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಹಿಂಬದಿಯ ಹಳೆ ಮನೆಯೊಂದರ ಪಕ್ಕದ ಕೊಟ್ಟಿಗೆಯಲ್ಲಿ ಕೊಳೆತ ಸ್ಥಿತಿಯಲ್ಲಿರುವ ಅಟೋ ಚಾಲಕರೊಬ್ಬರ ಮೃತ ದೇಹ ಆ.30ರಂದು ಪತ್ತೆಯಾಗಿದೆ‌.

ಆಟೋ ಚಾಲಕನಾಗಿದ್ದ ಸುದರ್ಶನ್ (37ವ) ಮೃತಪಟ್ಟವರು. ದಿ. ರಘುನಾಥ ರೈ ಮತ್ತು ವಿಮಲ ದಂಪತಿಯ ಪುತ್ರ ಸುದರ್ಶನ್ ಆಟೋ ಚಾಲಕನಾಗಿದ್ದು ಕಳೆದ ಕೊರೋನಾ ಲಾಕ್ ಡೌನ್ ಬಳಿಕ ಮನೆಯಲ್ಲೇ‌ ಇದ್ದು ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಆ.30 ರಂದು ಸ್ಥಳೀಯರಿಗೆ ಸುದರ್ಶನ ರೈ ಅವರ ಮನೆಯಿಂದ ದುರ್ನಾಥ ಬೀರುತ್ತಿರುವ ಕುರಿತು ಪರಿಶೀಲಿಸಿದಾಗ ಮನೆಯ ಕೊಟ್ಟಿಗೆಯಲ್ಲಿ ಸುರ್ದಶನ್ ಅವರ ಮೃತ ದೇಹ ಚಯರ್ ನಲ್ಲಿ ಕುಳಿತ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದ್ದು ಘಟನೆಯ ಕುರಿತು ಪೊಲೀಸರಿಗೆ ಮತ್ತು ಸುದರ್ಶನ್ ಅವರ ತವರು ಮನೆಯಲ್ಲಿರುವ ಪತ್ನಿಗೆ ಮಾಹಿತಿ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣೆಯ ಪೊಲೀಸರು, ಸ್ಥಳೀಯ ನಗರಸಭಾ ಸದಸ್ಯೆ ಗೌರಿ ಬನ್ನೂರು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಬ್ಲಾಕ್ ಕಾಂಗ್ರೆಸ್ ಸೇವಾದಳದ ಜೋಕಿಂ ಡಿ ಸೋಜ ಸೇರಿದಂತೆ ಆನೇಕರು ಆಗಮಿಸಿದ್ದಾರೆ. ಮೃತರು ಪತ್ನಿ ಶಶಿಕಲಾ, ಒಂದೂವರೆ ವರ್ಷದ ಗಂಡು ಮಗು ಮತ್ತು ಸಹೋದರಿಯರಾದ ಪ್ರಮೀಳಾ, ಜಯಶ್ರೀ ಅವರನ್ನು ಅಗಲಿದ್ದಾರೆ.