Friday, November 22, 2024
ವಾಣಿಜ್ಯ

ಜಿಡಿಪಿ ದತ್ತಾಂಶ ಆಗಸ್ಟ್ 31ಕ್ಕೆ ಬಿಡುಗಡೆ; 24 ವರ್ಷದಲ್ಲೇ ಹೀನಾಯ ಕುಸಿತದ ನಿರೀಕ್ಷೆ – ಕಹಳೆ ನ್ಯೂಸ್

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ ನಿಂದ ಜೂನ್ ತನಕದ ಮೊದಲ ತ್ರೈ ಮಾಸಿಕದಲ್ಲಿ G20 ರಾಷ್ಟ್ರಗಳ ಪೈಕಿಯೇ ಭಾರತದ ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಭಾರೀ ಪ್ರಮಾಣದಲ್ಲಿ ಕುಗ್ಗಲಿದೆ. ಕೊರೊನಾ ನಿಯಂತ್ರಣಕ್ಕಾಗಿ ಹೇರಿದ ಕಠಿಣ ಲಾಕ್ ಡೌನ್ ನ ಪರಿಣಾಮ ಆರ್ಥಿಕತೆ ಮೇಲೆ ದೊಡ್ಡ ಮಟ್ಟದಲ್ಲಿ ಆಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜೂನ್ 30ಕ್ಕೆ ಕೊನೆಯಾದ ತ್ರೈಮಾಸಿಕದ ಫಲಿತಾಂಶ ಆಗಸ್ಟ್ 31, 2020ರ ಸೋಮವಾರ ಬಿಡುಗಡೆ ಆಗಲಿದೆ. 1996ರಿಂದ ಭಾರತದಲ್ಲಿ ತ್ರೈಮಾಸಿಕವಾಗಿ ಜಿಡಿಪಿ ದತ್ತಾಂಶ ಬಿಡುಗಡೆ ಮಾಡುತ್ತಿದ್ದು, ಇಲ್ಲಿಯವರೆಗಿನ ಲೆಕ್ಕಾಚಾರದಲ್ಲೇ ಅತ್ಯಂತ ಹೀನಾಯ ಮಟ್ಟದ ಜಿಡಿಪಿ ಇದಾಗಬಹುದು ಎಂಬ ಅಂದಾಜು ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಧ್ಯಮಗಳು ನಡೆಸಿರುವ ಸಮೀಕ್ಷೆ ಪ್ರಕಾರ, 25.5 ಪರ್ಸೆಂಟ್ ನಿಂದ 15.2 ಪರ್ಸೆಂಟ್ ಮಧ್ಯೆ ಜಿಡಿಪಿ ಕುಗ್ಗಬಹುದು. ಈ ತನಕ ಬಂದಿರುವ ಮಾಹಿತಿ ಪ್ರಕಾರ, ವಿಶ್ವದ ಟಾಪ್ 20 ಆರ್ಥಿಕತೆಯಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಜಿಡಿಪಿ ಕುಸಿದಿರುವುದು ಯು.ಕೆ. (ಯುನೈಟೆಡ್ ಕಿಂಗ್ ಡಮ್) ವರದಿ ಮಾಡಿದೆ. ಅಲ್ಲಿ ಜೂನ್ ತ್ರೈಮಾಸಿಕದಲ್ಲಿ 21.7% ಕುಗ್ಗಿದೆ.

ಈ ವರ್ಷದ ಮಾರ್ಚ್ 25ರಿಂದ ಭಾರತದಲ್ಲಿ ಲಾಕ್ ಡೌನ್ ಹೇರಲಾಯಿತು. ಅದು ಮೇ ಅಂತ್ಯದ ತನಕ ಮುಂದುವರಿಯಿತು. ಆ ನಂತರ ನಿಧಾನವಾಗಿ ತೆರವು ಮಾಡಲಾಯಿತು. ಏಪ್ರಿಲ್- ಮೇ ತಿಂಗಳಲ್ಲಿ ಬಹುತೇಕ ವ್ಯಾಪಾರ- ವ್ಯವಹಾರ ಕೊಚ್ಚಿಹೋದವು. ಜೂನ್ ನಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡರೂ ಕೊರೊನಾದ ಮುಂಚಿನ ಸ್ಥಿತಿಗೆ ಮರಳಲಿಲ್ಲ.

ತಜ್ಞರು ಅಭಿಪ್ರಾಯ ಪಡುವಂತೆ, ಕೊರೊನಾ ಬಿಕ್ಕಟ್ಟಿನಿಂದ ಅತಿ ದೊಡ್ಡ ಪೆಟ್ಟು ಬೀಳುವುದು ಅಸಂಘಟಿತ ವಲಯಗಳಿಗೆ. ಇಂಥ ಸನ್ನಿವೇಶದಲ್ಲಿ ಸಂಘಟಿತ ವಲಯವನ್ನು ಮಾತ್ರ ಗಣನೆಗೆ ತೆಗೆದುಕೊಂಡು, ಜಿಡಿಪಿಯನ್ನು ಅಳೆದರೆ ಅದು ವಾಸ್ತವಕ್ಕಿಂತ ತುಂಬ ಹೆಚ್ಚು ಎಂದು ಬಿಂಬಿಸಿದಂತಾಗುತ್ತದೆ.