Recent Posts

Friday, November 22, 2024
ಶಿಕ್ಷಣ

‘ಶಿಕ್ಷಣ ಸಾಮಾಜಿಕ ಕಲಿಕೆ ವೈಯಕ್ತಿಕ’ ಅಂಬಿಕಾ ಮಹಾವಿದ್ಯಾಲಯದಲ್ಲಿ ನೂತನ ಶೈಕ್ಷಣಿಕ ವರ್ಷದ ಆನ್ ಲೈನ್ ತರಗತಿಗಳ ಉದ್ಘಾಟನಾ ಸಮಾರಂಭ-ಕಹಳೆ ನ್ಯೂಸ್

‘ಶಿಕ್ಷಣ ಸಾಮಾಜಿಕ ಕಲಿಕೆ ವೈಯಕ್ತಿಕ’ ಅಂಬಿಕಾ ಮಹಾವಿದ್ಯಾಲಯದಲ್ಲಿ ನೂತನ ಶೈಕ್ಷಣಿಕ ವರ್ಷದ ಆನ್ ಲೈನ್ ತರಗತಿಗಳ ಉದ್ಘಾಟನಾ
ಸಮಾರಂಭದಲ್ಲಿ ಡಾ. ಮಾಧವ ಭಟ್ ಅಭಿಮತ ಕಲಿಕೆ ನಿರಂತರವಾದ ಪ್ರಕ್ರಿಯೆ, ಇದೀಗ ದೇಶದಲ್ಲಿನ ಯುವಜನಾಂಗ ಜಾಡ್ಯವನ್ನು ಕೊಡವಿ ಎದ್ದು ಬಂದು ನೂತನ ಸಂವತ್ಸರಕ್ಕೆ ತೆರೆದುಕೊಳ್ಳಬೇಕಾಗಿದೆ.

ಅಭಿವೃದ್ಧಿಗೆ ಬದಲಾವಣೆಗಳ ಅಗತ್ಯವಿದೆ.ಸಮಸ್ಯೆಗಳಿಂದ ಸಾಮಾಥ್ರ್ಯಹುಟ್ಟಿಕೊಳ್ಳುತ್ತದೆ, ಸದಾವಕಾಶಗಳು ಮೂಡಿಬರುತ್ತದೆ. ಕಲಿಕೆ ವೈಯಕ್ತಿಕವಾದದು, ಶಿಕ್ಷಣ ಸಾಮಾಜಿಕವಾದುದು. ಕಲಿಕೆ ಎನ್ನುವುದು ಉತ್ಸಾಹಭರಿತವಾದ ಚಟುವಟಿಕೆಯಾಗಿದ್ದು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಸೂಕ್ತ. ಅನೇಕ ಪ್ರಥಮಗಳಿಗೆ ಪ್ರಥಮವಾಗಿರುವ ಅಂಬಿಕಾ ಸಂಸ್ಥೆಯ ಈ ಕಾರ್ಯ ವಿದ್ಯಾರ್ಥಿಗಳ ಉತ್ತರೋತ್ತರ ಯಶಸ್ಸಿಗೆ ಕಾರಣವಾಗಲಿ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಮಾಧವ ಭಟ್ ಇವರು ಸಂಸ್ಥೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತ, ವಿದ್ಯಾರ್ಥಿಗಳಿಗೆ ಮತ್ತು ಅದ್ಯಾಪಕವೃಂದಕ್ಕೆ ಶುಭಹಾರೈಸಿದರು. ಶ್ರೀಯುತರು ತಮ್ಮ ದಿವ್ಯ ಹಸ್ತದಿಂದ ವಿಧ್ಯುಕ್ತವಾಗಿ ದೀಪ ಬೆಳಗಿಸಿ ಶಿಕ್ಷಣಕಾರ್ಯ ನಿರ್ವಿಘ್ನವಾಗಿ ನೆರವೇರಲಿ ಎಂದು ಶುಭಕೋರಿದರು. ಅಂಬಿಕಾ ಮಹಾವಿದ್ಯಾಲಯದ ನೂತನ ಪ್ರಾಂಶುಪಾಲರಾದ ವಿದ್ವಾನ್ ಡಾ.ವಿನಾಯಕ ಭಟ್ ಗಾಳಿಮನೆ ಇವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಶಿಕ್ಷಣದ ಜೊತೆಗೆ ಉದ್ಯೋಗ ಭದ್ರತೆಯನ್ನು ಕಲ್ಪಿಸಿಕೊಡ ಬೇಕಾಗಿರುವುದರಿಂದ ಸರ್ಕಾರಿ ಉದ್ಯೋಗಗಳಾದ ಎಸ್.ಡಿ.ಎ, ಎಫ್.ಡಿ.ಎ, ರೈಲ್ವೆ , ಪೋಲಿಸ್ ಇಲಾಖೆ, ಪಿ.ಡಿ.ಓ ಹೀಗೆ ಅನೇಕ ಪರೀಕ್ಷೆಗಳ ಕುರಿತು ಪದವಿಯ ಮೊದಲ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು, ಎಂಬ ವಿಚಾರವನ್ನು ತಿಳಿಸಿದರು. ವೇದಿಕೆಯಲ್ಲಿ ಸಂಚಾಲಕರಾದ ಶ್ರೀ. ಸುಬ್ರಹ್ಮಣ್ಯ ನಟ್ಟೋಜ ಮತ್ತು ಶ್ರೀಮತಿ ರಾಜಶ್ರೀ ನಟ್ಟೋಜ ಇವರುಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀ ರಮೇಶ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು