Sunday, January 19, 2025
ಹೆಚ್ಚಿನ ಸುದ್ದಿ

`ಆಧಾರ್ ಕಾರ್ಡ್’ ಅಪ್ ಡೇಟ್ ಮಾಡೋರಿಗೆ ಬಿಗ್ ಶಾಕ್ : ಉಚಿತ ಅಪ್ ಡೇಟ್ ಗೆ `UIDAI’ ಬ್ರೇಕ್ – ಕಹಳೆ ನ್ಯೂಸ್

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಆಧಾರ್ ಕಾರ್ಡ್… ಈಗ ಎಲ್ಲಾ ಕೆಲಸಕ್ಕೂ ಬೇಕಾಗಿರುವಂತ ಅಗತ್ಯ ದಾಖಲೆಯಾಗಿದೆ. ಇಂತಹ ಆಧಾರ್ ಕಾರ್ಡ್ ಅಪ್ ಡೇಟ್ ಮಾಡೋದಕ್ಕೆ ಇದುವರೆಗೆ ಉಚಿತವಾದಂತ ಅವಕಾಶವನ್ನು ಯುಐಡಿಎಐ ಅವಕಾಶ ನೀಡಿತ್ತು. ಆದ್ರೇ ಇದೀಗ ಉಚಿತ ಆಧಾರ್ ಕಾರ್ಡ್ ಅಪ್ ಡೇಟ್ ಗೆ ಬ್ರೇಕ್ ಹಾಕಲಾಗಿದೆ. ಇನ್ಮುಂದೆ ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಬೇಕಾದರೇ ರೂ.100 ಹಣ ಪಾವತಿಸಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು.. ಯುಐಡಿಎಐ ನಿಮ್ಮ ಆಧಾರ್ ಕಾರ್ಡ್ ನ ಬಯೋಮೆಟ್ರಿಕ್ ನವೀಕರಣದ ಅಪ್ ಡೇಟ್ ಗಾಗಿ ರೂ.100 ಸಂದಾಯ ಮಾಡಬೇಕಿದೆ. ಕೆಲ ದಿನಗಳ ಹಿಂದಿನಿಂದಲೇ ಈ ಬದಲಾವಣೆಯನ್ನು ಯುಐಡಿಎಐ ಮಾಡಿದ್ದು, ನಿಮ್ಮ ಬಯೋ ಮೆಟ್ರಿಕ್ ಬದಲಾವಣೆಯ ಅಪ್ ಡೇಟ್ ಗಾಗಿ ಇದೀಗ ರೂ.100 ಪಾವತಿಸಬೇಕಿದೆ. ಈ ಮೂಲಕ ಉಚಿತ ಆಧಾರ್ ಬಯೋ ಮೆಟ್ರಿಕ್ ಗೆ ಬ್ರೇಕ್ ಹಾಕಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದಹಾಗೇ, ಆಧಾರ್ ಕಾರ್ಡ್ ನಲ್ಲಿನ ವಿವರಗಳನ್ನು ಬದಲಾವಣೆ ಮಾಡುವ ಸಂಬಂಧ ವಿಧಿಸಲಾಗಿದ್ದಂತ ರೂ.50 ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನೀವು ವಿಳಾಸ ಸೇರಿದಂತೆ ವಿವಿಧ ಆಧಾರ್ ಅಪ್ ಡೇಟ್ ಗೆ ರೂ.50 ಪಾವತಿಸಬೇಕು ಅಷ್ಟೇ ಆಗಿದೆ. ಆದ್ರೇ ಬಯೋಮೆಟ್ರಿಕ್ ಅಪ್ ಡೇಟ್ ಗೆ ಮಾತ್ರ ರೂ.100 ಪಾವತಿ ಮಾಡಲೇಬೇಕಿದೆ.