Monday, November 25, 2024
ರಾಜಕೀಯ

ನೂತನ ಚುನಾವಣಾ ಆಯುಕ್ತ ರಾಜೀವ್ ಕುಮಾರ್​ – ಕಹಳೆ ನ್ಯೂಸ್

ನವದೆಹಲಿ: ಮಾಜಿ ರಾಜತಾಂತ್ರಿಕ ಅಧಿಕಾರಿ ರಾಜೀವ್ ಕುಮಾರ್ ಅವರು ನೂತನ ಚುನಾವಣಾ ಆಯುಕ್ತರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಏಷ್ಯನ್ ಡೆವಲಪ್​ಮೆಂಟ್ ಬ್ಯಾಂಕಿನ ವೈಸ್​ ಪ್ರೆಸಿಡೆಂಟ್ ಆಗಿ ತೆರಳಿದ ಅಶೋಕ್ ಲಾವಾಸ ಅವರಿಂದ ತೆರವಾಗಿದ್ದ ಸ್ಥಾನವನ್ನು ರಾಜೀವ್ ತುಂಬಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜೀವ್ ಅವರು ಜಾರ್ಖಂಡ್ ಕೆಡರ್​ನ 1984ರ ಬ್ಯಾಚಿನ ಐಎಎಸ್ ಅಧಿಕಾರಿ. 2024ರ ಚುನಾವಣೆ ಸಂದರ್ಭದಲ್ಲಿ ಅವರೇ ಮುಖ್ಯ ಚುನಾವಣಾಧಿಕಾರಿಯಾಗಬಹುದು. ನಿಯಮಾವಳಿ ಪ್ರಕಾರ, ಚುನಾವಣಾ ಆಯುಕ್ತರ ಅಧಿಕಾರಾವಧಿ ಆರು ವರ್ಷ ಅಥವಾ ಅವರ ವಯಸ್ಸು ಗರಿಷ್ಠ 65 ವರ್ಷ ಆಗುವ ತನಕ ಅಧಿಕಾರದಲ್ಲಿ ಇರಬಹುದು ಇದರಲ್ಲಿ ಯಾವುದು ಮೊದಲಾಗುವುದೋ ಅದು ಅನ್ವಯವಾಗುತ್ತದೆ. ರಾಜೀವ್ ಅವರು 1960ರ ಫೆಬ್ರವರಿಯಲ್ಲಿ ಜನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು 36 ವರ್ಷಗಳ ಸೇವಾವಧಿಯಲ್ಲಿ ಆರಂಭದಲ್ಲಿ ಬಿಹಾರ, ಜಾರ್ಖಂಡ್​ಗಳಲ್ಲಿ ನಂತರ ಕೇಂದ್ರದ ವಿವಿಧ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದ್ದರು. ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿ ಈ ವರ್ಷ ಫೆಬ್ರವರಿಯಲ್ಲಿ ಅವರು ನಿವೃತ್ತರಾಗಿದ್ದರು. ಏಪ್ರಿಲ್ 29ರಂದು ಅವರು ಪಬ್ಲಿಕ್ ಎಂಟರ್​ಪ್ರೈಸಸ್ ಸೆಲೆಕ್ಷನ್ ಬೋರ್ಡ್​ನ ಚೇರ್​ಪರ್ಸನ್ ಆಗಿ ಅವರು ನೇಮಕವಾಗಿದ್ದರು. ಎರಡು ತಿಂಗಳ ಅವಧಿಯಲ್ಲಿ ಕೋವಿಡದ್ 19 ಸಂಕಷ್ಟ ಇದ್ದಾಗ್ಯೂ 40 ಸೆಲೆಕ್ಷನ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಇದರಲ್ಲಿ ವರ್ಚುವಲ್ ಮತ್ತು ಫಿಸಿಕಲ್ ಇಂಟರ್​ವ್ಯೂವ್​ಗಳು ಒಳಗೊಂಡಿದೆ. (ಏಜೆನ್ಸೀಸ್)

ಮೊರಟೋರಿಯಂ ಅವಧಿಯಲ್ಲಿನ ಇಎಂಐ ಬಡ್ಡಿ ವಿಚಾರ ಸುಪ್ರೀಂ ಕೋರ್ಟ್​ನಲ್ಲಿ ನಾಳೆ ವಿಚಾರಣೆ