Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

Breaking News : ವಿಟ್ಲದಲ್ಲಿ ಕ್ರೈಸ್ತಯುವಕನಿಂದ ಹಿಂದೂ ಯುವತಿಯರ ಮತಾಂತರ ಯತ್ನ..! ; ಪೊಲೀಸ್ ದಾಳಿ, ಹಿಂದೂ ಸಂಘಟನೆಗಳ ಆಕ್ರೋಶ – ಕಹಳೆ ನ್ಯೂಸ್

ವಿಟ್ಲ : ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವಕನೊಬ್ಬನ ಮನೆಯಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಯುವತಿಯರಿಬ್ಬರು ಪೊಲೀಸ್ ದಾಳಿಯ ವೇಳೆ ಪತ್ತೆಯಾಗಿದ್ದಾರೆ ಎಂಬ ಆರೋಪ ವಿಟ್ಲ ಸಮೀಪದ ಕನ್ಯಾನ ಎಂಬಲ್ಲಿ ಕೇಳಿ ಬಂದಿದೆ.

ದಾಳಿ ನಡೆದಿರುವುದನ್ನು ವಿಟ್ಲ ಪೊಲೀಸರು ಖಚಿತಪಡಿಸಿದ್ದು ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ. ಮೂವರನ್ನೂ ಠಾಣೆಗೆ ಕರೆಯಿಸಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಬಳಿಕ ವಿವರ ನೀಡಲಾಗುವುದು ಎಂದು ಮಾದ್ಯಮಗಳಿಗೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಟ್ಲದ ಕನ್ಯಾನ ಕಾಲೇಜು ಸಮೀಪ ಕ್ರೈಸ್ತ ಸಮುದಾಯದ ಯುವಕನಿಗೆ ಫ್ಯಾನ್ಸಿ ಅಂಗಡಿ ಹೊಂದಿದ್ದೂ , ಕನ್ಯಾನ ಸಮೀಪದ ಕೇಪುಳಗುಡ್ಡೆ ಎಂಬಲ್ಲಿ ಮನೆಯನ್ನು ಹೊಂದಿದ್ದಾನೆ. ಪೊಲೀಸರು ಈತನ ಮನೆಗೆ ದಾಳಿ ಮಾಡಿದ್ದೂ, ಆ ಸಂಧರ್ಭದಲ್ಲಿ ಕರೋಪಾಡಿ ಗ್ರಾಮದ ಒಂದೇ ಮನೆಯ ಅಕ್ಕ ಹಾಗೂ ತಂಗಿ ಮನೆಯಲ್ಲಿ ಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಆರೋಪಿ ತನ್ನ ಫ್ಯಾನ್ಸಿ ಅಂಗಡಿಗೆ ಬರುತ್ತಿದ್ದ ಈ ಇಬ್ಬರೂ ಸಹೋದರಿಯರಿಗೆ ಪುಸಲಾಯಿಸಿ ಹಾಗೂ ಆಮೀಷ ಒಡ್ಡಿ ಕ್ರೈಸ್ತ ಧರ್ಮಕ್ಕೆ ಸೇರಿಸಿ ಮತಾಂತರಕ್ಕೆ ಯತ್ನಿಸುತ್ತಿದ್ದಾನೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದ್ದಾರೆ.

ಸಹೋದರಿಯರನ್ನು ಯುವಕ ಮನೆಗೆ ಕರೆಸಿದ ಮಾಹಿತಿ ದೊರೆಯುತ್ತಲೇ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀರಿಗೆ ಮಾಹಿತಿ ನೀಡಿದ್ದು, ಪೊಲೀಸರು ದಾಳಿ ನಡೆಸಿದ್ದಾರೆ. ಆ ಯುವಕನ ವಿರುದ್ದ ಈ ಹಿಂದೆಯೂ ಮತಾಂತರಕ್ಕೆ ಸಂಭಂಧಿಸಿದ ದೂರುಗಳು ಕೇಳಿ ಬಂದಿದ್ದವು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮತಾಂತರಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ಹಿಂ.ಜಾ.ವೇ ಮುಖಂಡ ಗಣರಾಜ್ ಭಟ್ ಆಗ್ರಹ :

ಅಮಾಯಕ ಹಿಂದು ಯುವತಿಯರ ತಲೆ ಕೆಡಿಸಿ, ಯುವಕ ಮತಾಂತರಕ್ಕೆ ಯತ್ನಿಸುತ್ತಿದ್ದಾನೆ. ಹಾಗಾಗಿ ಆತನನ್ನು ಹಾಗೂ ಆತನಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.

ಈ ಕುರಿತು ಕಹಳೆ ನ್ಯೂಸ್ ಗೆ ಹೇಳಿಕೆ ನೀಡಿದ ಹಿಂ.ಜಾ.ವೇ. ಮುಖಂಡ ಗಣರಾಜ್ ಭಟ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದೊಂದು ವ್ಯವಸ್ಥಿತ ಮತಾಂತರದ ಸಂಚು ಎಂದು ಹೇಳಿದ್ದಾರೆ. ಅಲ್ಲದೆ, ಪೋಲೀಸರು ತಕ್ಷಣ ಈತನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ‌.