ತಂದೆಗೆ ವಿಷ ಬೆರೆಸಿ ಹತ್ಯೆ ಯತ್ನ ಪ್ರಕರಣ ; ಆರೋಪಿಗೆ ಜಾಮೀನು ಮಂಜೂರು – ಕಹಳೆ ನ್ಯೂಸ್
ಪುತ್ತೂರು: ತಂದೆಗೆ ಆಹಾರದಲ್ಲಿ ವಿಷ ಬೆರೆಸಿ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಲೋಕೇಶ್ ಎಂಬವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್ ಫಿರೇರಾ ಜಾಮೀನು ಮಂಜೂರು ಮಾಡಿದ್ದಾರೆ.
ಸುಬ್ರಹ್ಮಣ್ಯ ಪೋಲೀಸ್ ಠಾಣಾ ವ್ಯಾಪ್ತಿಯ ಅಂಜೇರಿ ಹೊನ್ನಪ್ಪ ನಾಯ್ಕರವರ ಪುತ್ರರಾದ ದೇವಿಪ್ರಸಾದ್ ಮತ್ತು ಲೋಕೇಶ್ ಎಂಬವರು ಹೊನ್ನಪ್ಪ ನಾಯ್ಕರವರಿಗೆ ಜುಲೈ.23 ರಂದು ರಾತ್ರಿ ಆಹಾರದಲ್ಲಿ ವಿಷ ಬೆರೆಸಿ ಹತ್ಯೆಗೆ ಯತ್ನಿಸಿದ್ದರು ಎಂದು ಆರೋಪಿಸಿ, ಹೊನ್ನಪ್ಪ ನಾಯ್ಕರವರ ಪತ್ನಿ ಸವಿತಾರವರು ಸುಬ್ರಹ್ಮಣ್ಯ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೇವಿಪ್ರಸಾದ್ ಮತ್ತು ಲೋಕೇಶ್‍ರವರನ್ನು ಪೋಲೀಸರು ಬಂಧಿಸಿ,ತದನಂತರ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಹೀಗಿರುವಾಗ, ಎರಡನೇ ಆರೋಪಿ ಲೋಕೇಶ್ ತನ್ನ ಪರ ವಕೀಲ ಕಜೆ ಲಾ ಚೇಂಬರ್‍ನ ಮಹೇಶ್ ಕಜೆಯವರ ಮುಖಾಂತರ ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು.
ಸದ್ರಿ ಘಟನೆಯು ನಡೆದಿತ್ತು ಎನ್ನಲಾದ ಸಂದರ್ಭದಲ್ಲಿ, ಆರೋಪಿ ಲೋಕೇಶ್‍ರವರು ಸದ್ರಿ ಸ್ಥಳದಲ್ಲಿರಲಿಲ್ಲ, ಹಾಗೂ ಹೊನ್ನಪ್ಪ ನಾಯ್ಕರವರಿಗೆ ಅವರು ಆಹಾರದಲ್ಲಿ ವಿಷ ಬೆರಸಿರುತ್ತಾರೆ ಎಂಬುವುದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳು ಲಭ್ಯವಿರುವುದಿಲ್ಲ, ಯಾವುದೋ ಆಕಸ್ಮಿಕ ನರಹತ್ಯೆಯ ಸೇವನೆ ಮಾಡಿರುವುದರಿಂದ ಹೊನ್ನಪ್ಪ ನಾಯ್ಕ್ ರವರಿಗೆ ಅನಾರೋಗ್ಯವುಂಟಾಗಿರುತ್ತದೆ ಎಂಬ ಬಗ್ಗೆ ವೈದ್ಯರ ವರದಿಯಲ್ಲಿ ಕೂಡಾ ನಮೂದಾಗಿರುತ್ತದೆ ಮತ್ತು ಹೊನ್ನಪ್ಪ ನಾಯ್ಕರವರು ಈಗಾಗಲೇ ಅಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಿರುತ್ತಾರೆ ಎಂಬಿತ್ಯಾದಿ ಅಂಶಗಳ್ನುವಾದಿಸಿದ್ದರು ಆರೋಪಿ ಪರ ವಾದ ಮಂಡಿಸಲಾಗಿತ್ತು.
ಆರೋಪಿ ಪರ ವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.