ಮೊಬೈಲ್ ಗೇಮರ್ ಗಳಿಗೆ ಭಾರತ ಸರ್ಕಾರ ದೊಡ್ಡ ಶಾಕ್ ನೀಡಿದೆ. ನಿನ್ನೆ ಭಾರತ ಸರ್ಕಾರ 118 ವಿದೇಶಿ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿದೆ. ಇದ್ರಲ್ಲಿ ಹೆಚ್ಚು ಪ್ರಸಿದ್ಧವಾಗಿದ್ದ ಪಬ್ಜಿ ಸೇರಿದೆ. ಇದ್ರ ಲೈಟ್ ವರ್ಜನ್ ಕೂಡ ಬ್ಯಾನ್ ಆಗಿದೆ. ಇಷ್ಟೇ ಅಲ್ಲ ಭಾರತದಲ್ಲಿ ಪ್ರಸಿದ್ಧಿ ಪಡೆದಿದ್ದ ಇನ್ನೊಂದು ಅಪ್ಲಿಕೇಷನ್ ಲುಡೋ ಆಲ್ ಸ್ಟಾರ್ ಕೂಡ ಬ್ಯಾನ್ ಆಗಿದೆ.
ಲುಡೋ ವರ್ಲ್ಡ್, ಲುಡೋ ಸೂಪರ್ಸ್ಟಾರ್ ಅಪ್ಲಿಕೇಷನ್ ನಿಷೇಧಿಸಲಾಗಿದೆ. ಲಾಕ್ ಡೌನ್ ಸಮಯದಲ್ಲಿ ಲುಡೋ ಅತ್ಯಂತ ಜನಪ್ರಿಯ ಆಟವಾಗಿತ್ತು. ಮೇ 2020 ರಲ್ಲಿ, ಲುಡೋ ಕಿಂಗ್ 189 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಮತ್ತು 51 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿತ್ತು.
ನಿಷೇಧಿಸಲ್ಪಟ್ಟಿರುವ ಅಪ್ಲಿಕೇಷನ್ ಗಳಲ್ಲಿ ಚೀನಾ ಅಪ್ಲಿಕೇಷನ್ ಕೂಡ ಸೇರಿದೆ. ಜನರ ವೈಯಕ್ತಿಕ ಮಾಹಿತಿಯನ್ನು ಇವು ಕದಿಯುತ್ತಿದ್ದವು ಎಂಬ ಕಾರಣಕ್ಕೆ ಬ್ಯಾನ್ ಮಾಡಲಾಗಿದೆ. ಆದ್ರೆ ಕೊರೊನಾ ಸಮಯದಲ್ಲಿ ಜನರಿಗೆ ಆಪ್ತವಾಗಿದ್ದ ಪಬ್ಜಿ ಹಾಗೂ ಲುಡೋ ಅಪ್ಲಿಕೇಷನ್ ನಿಷೇಧವಾಗಿರುವುದು ಅನೇಕರ ಬೇಸರಕ್ಕೆ ಕಾಣವಾಗಿದೆ. ಮೊಬೈಲ್ ನಲ್ಲಿ ಅಪ್ಲಿಕೇಷನ್ ಇರಲಿದೆ. ಅದನ್ನು ಬಳಕೆದಾರರು ಡಿಲೀಟ್ ಮಾಡಬೇಕೆಂದು ಅಧಿಕಾರಿಗಳು ಹೇಳಿದ್ದಾರೆ.