ನವದೆಹಲಿ, ಸೆ.3-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್‍ಸೈಟ್‍ಗೆ ಲಿಂಕ್ ಆಗಿರುವ ಟ್ವಿಟರ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಈ ಕುಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಮಂತ್ರಿ ಅವರ ಕಾರ್ಯಾಲಯ ಮತ್ತು ಕೇಂದ್ರ ಗೃಹ ಸಚಿವಾಲಯ ತೀವ್ರ ತನಿಖೆ ನಡೆಸುತ್ತಿದೆ.
ಚೀನಾದ ಪಬ್‍ಜಿ ವಿಡಿಯೋಗೇಮ್ ಸೇರಿದಂತೆ 120 ಮೊಬೈಲ್ ಆಪ್‍ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿ ಚೀನಾಗೆ ದೊಡ್ಡ ಶಾಕ್ ನೀಡಿದ ಬೆನ್ನಲ್ಲೇ ಪ್ರಧಾನಿಯವರ ವೆಬ್‍ಸೈಟ್ ಹ್ಯಾಕ್ ಆಗಿರುವುದು ಆತಂಕದ ಸಂಗತಿಯಾಗಿದೆ.
ಪ್ರಧಾನಿ ಮೋದಿ ಅವರ ಪರ್ಸನಲ್ ವೆಬ್‍ಸೈಟ್ ಹ್ಯಾಕ್ ಆಗಿರುವುದನ್ನು ಅವರ ಟ್ವಿಟರ್ ಖಾತೆ ಖಚಿತಪಡಿಸಿದೆ. ಇದಕ್ಕೆ ಕನ್ನ ಹಾಕಿರುವುದರಿಂದ ಪ್ರಧಾನಿ ಅವರ ವೆಬ್‍ಸೈಟ್‍ಗೆ ಯಾವುದೇ ತೊಂದರೆಯಾಗಿಲ್ಲ . ಈಗ ಅವರ ಖಾತೆಯನ್ನು ಸರಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಮೋದಿ ಅವರ ವೈಯಕ್ತಿಕ ವೆಬ್‍ಸೈಟ್ ಮೂಲಕ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲಾಗಿದೆ. ಅವರ ವೆಬ್‍ಸೈಟ್‍ನನ್ನು ಸುರಕ್ಷಿತ ಮತ್ತು ಸುಭದ್ರವಾಗಿಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಟ್ವೀಟರ್‍ನಲ್ಲಿ ತಿಳಿಸಲಾಗಿದೆ.
ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ ಕ್ರಿಪ್ರೋಕರೆನ್ಸಿಗಳ (ಬಿಟ್ ಕಾಯಿನ್ಸ್) ಮುಖಾಂತರ ಸಹಾಯ ಮಾಡುವಂತೆ ಸರಣಿ ಟ್ವಿಟ್‍ಗಳ ಮೂಲಕ ನರೇಂದ್ರ ಮೋದಿ ಅವರ ವೆಬ್‍ಸೈಟ್ ಖಾತೆಯಿಂದ ಮನವಿ ಪ್ರಕಟಗೊಂಡಿದೆ. ಇದು ಹ್ಯಾಕರ್‍ಗಳ ದುಷ್ಕøತ್ಯವಾಗಿದೆ.
ಈ ಖಾತೆಯಿಂದ ಹ್ಯಾಕರ್‍ಗಳು ಬಿಟ್ ಕಾಯಿನ್‍ಗಳನ್ನು ದೇಣಿಗೆ ನೀಡುವಂತೆ ಹಲವು ಟ್ವಿಟ್‍ಗಳನ್ನು ಕೋರಲಾಗಿದೆ. ಪ್ರಧಾನಿ ಮೋದಿ ಅವರ ವೈಯಕ್ತಿಕ ವೆಬ್‍ಸೈಟ್‍ಗೆ ಲಿಂಕ್ ಆಗಿರುವ ಟ್ವಿಟರ್ ಖಾತೆಯನ್ನು ಜಾನ್ ವಿಕ್ ಎಂಬಾತನಿಂದ ಹ್ಯಾಕ್ ಮಾಡಿರುವುದು ದೃಢಪಟ್ಟಿದೆ.
ನರೇಂದ್ರ ಮೋದಿ ಅವರ ಈ ಟ್ವಿಟ್ ಖಾತೆ 2.5 ದಶಲಕ್ಷ ಅನುಯಾಯಿಗಳು ಮತ್ತು ಅಭಿಮಾನಿಗಳನ್ನು ಹೊಂದಿದ್ದು, ಅತ್ಯಂತ ಜನಪ್ರಿಯ ವೆಬ್‍ಸೈಟ್ ಎನಿಸಿದೆ. ತನಿಖೆ ತೀವ್ರ : ಪ್ರಧಾನಿಯವರ ಟ್ವಿಟ್ ಖಾತೆಗೆ ಕನ್ನ ಹಾಕಿರುವ ದುಷ್ಕøತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ವಿವಿಧ ತನಿಖಾ ಸಂಸ್ಥೆಗಳು ಎಲ್ಲಾ ಆಯಾಮಗಳಿಂದಲೂ ತನಿಖೆ ತೀವ್ರಗೊಳಿಸಿವೆ.