Sunday, January 19, 2025
ಸುದ್ದಿ

ರವೆ ಬರ್ಫಿ – ಅಡುಗೆ ಮನೆ

Rava-burfi
Rava-burfi

ರವೆ ಬರ್ಫಿ – ಅಡುಗೆ ಮನೆ 

ಬೇಕಾಗುವ ಪದಾರ್ಥಗಳು
  • ತುಪ್ಪ – 2 ಚಮಚ
  • ರವೆ – 1 ಬಟ್ಟಲು
  • ಕೊಬ್ಬರಿ ತುರಿ – ಮುಕ್ಕಾಲು ಬಟ್ಟಲು
  • ಕಾಲು- ಎರಡೂವರೆ ಬಟ್ಟಲು
  • ಸಕ್ಕರೆ – 1 ಬಟ್ಟಲು
  • ಬಾದಾಮಿ ಪುಡಿ – 2 ಚಮಚ
  • ಗೋಡಂಬಿ ಪುಡಿ – 2 ಚಮಚ
  • ಏಲಕ್ಕಿ ಪುಡಿ – ಸ್ವಲ್ಪ
ಮಾಡುವ ವಿಧಾನ…
  • ಬಾಣಲೆ ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ನಂತರ ರವೆ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಕೊಬ್ಬರಿ ತುರಿ ಹಾಕಿ ಕೆಂಪಗೆ ಹುರಿದು ಪಕ್ಕಕ್ಕೆ ಇಟ್ಟುಕೊಳ್ಳಬೇಕು.
  • ಮತ್ತೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಹಾಲನ್ನು ಹಾಕಿ ಚೆನ್ನಾಗಿ ಕಾಯಿಸಬೇಕು. ಬಳಿಕ ಈ ಹಾಲಿಗೆ ಹುರಿದುಕೊಂಡ ರವೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಒಲೆಯ ಮೇಲೆಯೇ 5 ನಿಮಿಷ ಕೈಯಾಡಿಸಬೇಕು.
  • ನಂತರ ಸಕ್ಕರೆ, ಬಾದಾಮಿ, ಗೋಡಂಬಿ ಹಾಕಿ ಮಿಶ್ರಣ ಮಾಡಬೇಕು. ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
  • ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಹಾಕಿ ಸಮ ಮಾಡಿ, ಬಾದಾಮಿ ಚೂರುಗಳನ್ನು ಹಾಕಿ 5-10 ನಿಮಿಷ ಬಿಟ್ಟು ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಕರವಾದ ರವೆ ಬರ್ಫಿ ಸವಿಯಲು ಸಿದ್ಧ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು