ಬೆಂಗಳೂರಿನಲ್ಲಿ 40 ಲಕ್ಷ ರೂ. ಮೌಲ್ಯದ ವಜ್ರದ ಹರಳು ಮಾರಾಟಕ್ಕೆ ಯತ್ನ ; ಬಲ್ನಾಡಿನ ರವಿ ಕುಮಾರ್ ಕುಂಜತ್ತಾಯ ಸಹಿತ ಮೂವರ ಹೆಡೆಮುರಿಕಟ್ಟಿದ ಪೋಲೀಸರು – ಕಹಳೆ ನ್ಯೂಸ್
ಚಿನ್ನಾಭರಣ ತಯಾರಿಸುವ ಅಂಗಡಿಗೆ ಲಕ್ಷಾಂತರ ರೂ ಮೌಲ್ಯದ ಅಪರೂಪದ ವಜ್ರದ ಹರಳು ಮಾರಾಟಕ್ಕೆ ಹೊಂಚು ಹಾಕುತ್ತಿದ್ದ ಪುತ್ತೂರಿನ ಬೆಳಂದೂರು ಮತ್ತು ಬಲ್ನಾಡು ನಿವಾಸಿಗಳಿಬ್ಬರ ಸಹಿತ ಮೂವರನ್ನು ಬೆಂಗಳೂರು ಸಿಟಿ ಮಾರುಕಟ್ಟೆ ಪೊಲೀಸರು ಬೆಂಗಳೂರು ಸಿಟಿ ಮಾರುಕಟ್ಟೆಯಲ್ಲಿ ಬಳಿ ಸೆ.೧ ರಂದು ರಾತ್ರಿ ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ರಾಮಚಂದ್ರಪ್ಪರವರ ಪುತ್ರ ರವಿ ಕುಮಾರ್ (೫೪ವ), ಬೆಳಂದೂರು ಗ್ರಾಮದ ಅಣ್ಣಿ ಪೂಜಾರಿಯವರ ಪುತ್ರ ಸುಧೀರ್ (೨೮ವ) ಹಾಗೂ ಬೆಳ್ತಂಗಡಿ ತಾಲೂಕಿನ ಅರಂಬೋಡಿ ಗ್ರಾಮದ ರಾಮಚಂದ್ರರವರ ಪುತ್ರ ಪ್ರವೀಣ್ ಕುಮಾರ್ (೫೧ವ) ಬಂಧಿತ ಆರೋಪಿಗಳು.
ಬಂಧಿತರಿ0ದ ೯ ಅಪರೂಪದ ಹರಳುಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸೆ.೧ ರಂದು ರಾತ್ರಿ ಸಿಟಿ ಮಾರುಕಟ್ಟೆಯ ಅಂಚೆ ಪೇಟೆ ಬಳಿ ಆಭರಣ ತಯಾರಿಸುವ ಅಂಗಡಿಗೆ ವಜ್ರಗಳನ್ನು ಮಾರಾಟ ಮಾಡಲು ಬಂದ ಆರೋಪಿಗಳನ್ನು ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಮತ್ತವರ ಸಿಬ್ಬಂಧಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಕೆಂಪು ಬಣ್ಣದ ಪರ್ಸ್ನಲ್ಲಿ ಮತ್ತು ನೀಲಿ ಬಣ್ಣದ ಪೇಪರ್‌ನಲ್ಲಿ ವಜ್ರಗಳನ್ನು ಸುತ್ತಿಕೊಂಡು ಬಂದಿದ್ದರು. ಅವುಗಳ ನಿಖರ ಮೌಲ್ಯ ಗೊತ್ತಾಗದೆ ಕೂಡಲೆ ಆಭರಣ ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದಾಗ ಅದು ನಿಜಾವಾದ ವಜ್ರವೆಂದು ತಿಳಿದು ಬಂದಿದ್ದು, ಸುಮಾರು ೪೦ಲಕ್ಷ ಬೆಲೆ ಬಾಳುವ ವಜ್ರದ ಹರಳುಗಳು ಎಂದು ತಿಳಿಸಿದ್ದಾರೆ. ವಜ್ರದ ಹರಳುಗಳಿಗೆ ಸೂಕ್ತ ದಾಖಲೆಗಳಿಲ್ಲದಿರುವುದು ಮತ್ತು ವಾರಸುದಾರರು ಪತ್ತೆಯಾಗದಿರುವುದರಿಂದ ಎಲ್ಲವನ್ನೂ ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ. ಡಾ. ಸಂಜೀವ ಪಾಟೀಲ್ ತಿಳಿಸಿದ್ದಾರೆ.
ವಜ್ರ ಸಾಗಾಟ ಪ್ರಕರಣಕ್ಕೆ ಸಂಬ0ಧಿಸಿ ಓರ್ವ ಆರೋಪಿ ಕೃತ್ಯಕ್ಕೆ ತನ್ನ ಸಂಬ0ಧಿಕರೊಬ್ಬರ ಕಾರನ್ನು ಬಳಸಿಕೊಂಡಿದ್ದು ಕಳೆದ ಎರಡು ದಿನಗಳಿಂದ ಕಾರು ಮತ್ತು ಸಂಬ0ಧಿಕ ನಾಪತ್ತೆಯಾಗಿರುವ ಕುರಿತು ಮನೆ ಮಂದಿ ಆತಂಕ ವ್ಯಕ್ತಪಡಿಸಿದ್ದರು. ಇದೀಗ ವಜ್ರ ಸಾಗಾಟ ಪ್ರರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.