Recent Posts

Friday, November 22, 2024
ರಾಜಕೀಯರಾಜ್ಯ

ಗ್ರಾ.ಪಂ ಚುನಾವಣೆಗೆ ಆಯೋಗ ಸಿದ್ಧತೆ ಗುಂಪು ಪ್ರಚಾರ, ವಿಜಯೋತ್ಸವ ಮಾಡಲು ಅನುಮತಿ ಇಲ್ಲ! – ಕಹಳೆ ನ್ಯೂಸ್

ಕೋವಿಡ್ ಪೀಡಿತರಿಗೂ ಸ್ಪರ್ಧೆಗೆ ಅವಕಾಶ, ಪ್ರಚಾರದ ವೇಳೆ ಅಭ್ಯರ್ಥಿ ಜತೆ 5 ಮಂದಿಗೆ ಮಾತ್ರ, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಗೆದ್ದ ಮೇಲೆ ವಿಜಯೋತ್ಸವ ಆಚರಣೆ ಇಲ್ಲ. ಇಂತಹ ನಿಯಮದೊಂದಿಗೆ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣ ಆಯೋಗ ಸಿದ್ಧತೆ ನಡೆಸುತ್ತಿದೆ. ಈ ಕುರಿತು ಬಿಡುಗಡೆ ಮಾಡಿರುವ ಪ್ರಮಾಣಿತ ಕಾರ್ಯನಿರ್ವಹಣ ವಿಧಾನ (ಎಸ್‍ಒಪಿ)ಯ ಕರಡು ಮಾರ್ಗಸೂಚಿಗಳಾಗಿವೆ.


ಕೇಂದ್ರ ಗೃಹ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ ನಿಯಂತ್ರಣಕ್ಕೆ ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ. ಅದರಂತೆ ಗ್ರಾ.ಪಂ. ಸಾರ್ವತ್ರಿಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅನುಸರೆಸಬೇಕಾದ ಕ್ರಮಗಳ ಬಗ್ಗೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ತಜ್ಞರೊಂದಿಗೆ 2020ರ ಆ.18 ರಂದು ಚರ್ಚಿಸಿದ್ದು, ಅವರ ಸಲಹೆಗಳನ್ನು ಪರಿಗಣಿಸಿ ಎಸ್ ಒ ಪಿ ರಚಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಪ್ರಮುಖ ಮಾರ್ಗಸೂಚಿಗಳು :-
• ನಾಮಪತ್ರ ಸ್ವೀಕರಿಸುವ ಅಧಿಕಾರಿಗಳು ಮತ್ತು ಅಭ್ಯರ್ಥಿಗಳಿಗೆ ಸ್ಯಾನಿಟೈಸರ್ ಕಡ್ಡಾಯ.
• ಮಾಸ್ಕ್ ಮತ್ತು ಕೈ ಗವಸು ಕಡ್ಡಾಯ. ಚುನಾವಣಾಧಿಕಾರಿ ಕಚೇರಿಯಲ್ಲಿ 6 ಅಡಿ ಅಂತರ ಕಾಯ್ದುಕೊಳ್ಳಬೇಕು.
• ಸೋಂಕು ಪೀಡಿತನಾಗಿದ್ದರೆ ಸೂಚಕರ ಮೂಲಕ ನಾಮಪತ್ರ ಸಲ್ಲಿಸಬಹುದು.
• ಮತದಾನದ ದಿನ ಪುರುಷರು,ಮಹಿಳೆಯರ ಪ್ರತ್ಯೇಕ ಸರತಿ, ಸಾಮಾಜಿಕ ಅತಂರ ಇರಬೇಕು.
• ಪ್ರಚಾರದ ವೇಳೆ ಗರಿಷ್ಠ 5 ಜನ ಮಾತ್ರ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
• ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಚಾರ ಉತ್ತಮ.
• ಮುದ್ರಿತ ಕರಪತ್ರ ಹಂಚುವವರಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಕಡ್ಡಾಯ.
• ಗುಂಪುಗುಂಪಾಗಿ ಪ್ರಚಾರ ಇಲ್ಲ. ಧ್ವನಿವರ್ಧಕ ಬಳಸುವಂತಿಲ್ಲ.
• ಸೋಂಕುಪೀಡಿತ ಅಭ್ಯರ್ಥಿಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಮಾಡಬಹುದು.
• ಒಂದು ಮತಗಟ್ಟೆಗೆ ಗರಿಷ್ಠ 1 ಸಾವಿರ ಮತದಾರರು.
• ಮತದಾನ ಮತ್ತು ಮತ ಎಣಿಕೆ ಕೊಠಡಿ ಸ್ಯಾನಿಟೈಸೇಶನ್ ಕಡ್ಡಾಯ.
• ವಿಜೇತ ಅಭ್ಯರ್ಥಿಗಳಿಗೆ ದೃಢೀಕರಣ ಪತ್ರ ನೀಡುವಾಗ ಹಸ್ತಲಾಘವ ಇಲ್ಲ.
• ವಿಜಯೋತ್ಸವ ಅಚರಿಸುವಂತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಂಕು ಪೀಡಿತರಿಗೂ ಮತ ಚಲಾಯಿಸುವ ಹಕ್ಕು ನೀಡಬೇಕಾಗಿರುವುದರಿಂದ ಆಸ್ಪತ್ರೆ ಅಥವಾ ಹೋಂ ಕ್ವಾರಂಟೈನ್ನಲ್ಲಿ ಇರುವರಿಗೆ ಅಂಚೆ ಮತ ಪತ್ರ ನೀಡುವ ಬಗ್ಗೆ ಅಯೋಗ ಪ್ರತ್ಯೇಕ ಆದೇಶ ಅಥವಾ ಮಾರ್ಗಸೂಚಿ ಹೊರಡಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು