ಅಂಬಿಕಾ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕಲಿಕೆಗಾಗಿ ಬಿಎ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ – ಕಹಳೆ ನ್ಯೂಸ್
ಉಚಿತ ಪತ್ರಿಕೋದ್ಯಮ ಶಿಕ್ಷಣ, ಪ್ರಾಯೋಗಿಕ ತರಬೇತಿ:-
ಪುತ್ತೂರು: ಕೊರೋನಾ ಹೊರತಾಗಿಯೂ ಪಾರಂಪರಿಕ ಪದವಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ, ಅದರಲ್ಲೂ ಬಿಎ ವಿಭಾಗದ ವಿದ್ಯಾರ್ಥಿಗಳಿಗೆ ಕಳೆದ ಒಂದು ದಶಕದ ಈಚೆಗೆ ಉದ್ಯೋಗ ಪಡೆಯುವುದೆಂದರೆ ಸದಾ ಸವಾಲಾಗಿಯೇ ಕಾಣ ಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಎ ಓದಿದವರಿಗೂ ಉದ್ಯೋಗ ದೊರಕಿಸಿಕೊಡಬಹುದಾದ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಪತ್ರಿಕೋದ್ಯಮವೂ ಒಂದು. ಈ ಹಿನ್ನೆಲೆಯಲ್ಲಿ ಪುತ್ತೂರಿನ ಶಿಕ್ಷಣಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಸೃಷ್ಟಿಸುತ್ತಿರುವ ಅಂಬಿಕಾ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕಲಿಕೆಗಾಗಿ ಹೊಸ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.
ಉಚಿತ ಶಿಕ್ಷಣ : ಕೊರೋನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ಪತ್ರಿಕೋದ್ಯಮ, ಮನಃಶಾಸ್ತ್ರ ಹಾಗೂ ತತ್ವಶಾಸ್ತ್ರ ಕಾಂಬಿನೇಶನ್ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪದವಿ ಹಂತದಲ್ಲಿಯೇ ಪತ್ರಿಕಾ ಮಾಧ್ಯಮ ಹಾಗೂ ಟಿವಿ ಮಾಧ್ಯಮದ ಒಳಹೊರಗನ್ನು ಪ್ರಾಯೋಗಿಕ ನೆಲೆಯಿಂದ ಕಲಿಸುವ ಅಗತ್ಯವಿರುವ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಪತ್ರಿಕೋದ್ಯಮ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಸ್ಥಳೀಯ ವಾಹಿನಿ, ಪತ್ರಿಕೆಗಳಿಗೆ ಕಳುಹಿಸಿ ಅನುಭವ ಒದಗಿಸಲಾಗುತ್ತಿದೆ.
ಬರವಣ ಗೆ, ಟಿವಿ ಪತ್ರಿಕೋದ್ಯಮ, ಫೋಟೋಗ್ರಫಿ, ವೀಡಿಯೋಗ್ರಫಿಯೇ ಮೊದಲಾದ ತರಬೇತಿಯನ್ನು ಅಂಬಿಕಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಿದೆ. ಹಾಗೆಯೇ ಮನರಂಜನಾ ಮಾಧ್ಯಮಕ್ಕೆ ಅಗತ್ಯವಿರುವ ಸ್ಕ್ರಿಪ್ಟ್ ರೈಟಿಂಗ್ ಅನ್ನು ಕೂಡ ಪ್ರಸ್ತುತ ಶೈಕ್ಷಣ ಕ ವರ್ಷದಿಂದ ಕಲಿಸಿಕೊಡುವುದಕ್ಕೆ ಸಿದ್ಧತೆ ನಡೆದಿದೆ.
‘ವಿದ್ಯಾರ್ಥಿಗಳು ಮತ್ತು ಹೆತ್ತವರು ಈಗ ಆರ್ಥಿ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಬಿಎ ಓದುವವರಿಗಂತೂ ಉದ್ಯೋಗದ ಭಯ ಸದಾ ಇದೆ. ಹೀಗಾಗಿ ಉಚಿತ ಪತ್ರಿಕೋದ್ಯಮ ಶಿಕ್ಷಣ ನೀಡುವುದರ ಮುಖೇನ ನಾಳಿನ ಭರವಸೆಯನ್ನು ಮಕ್ಕಳ ಮುಖದಲ್ಲಿ ಅರಳಿಸುವುದೊಂದೇ ನಮ್ಮ ಈಗಿನ ಗುರಿ’ ಎನ್ನುವುದು ಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅವರ ಸ್ಪಷ್ಟ ನುಡಿ.
ಮನಃಶಾಸ್ತ್ರ: ಪುತ್ತೂರಿನ ಪರಿಸರದಲ್ಲಿ ಮೊದಲ ಬಾರಿಗೆ ಮನಃಶಾಸ್ತ್ರದ ಅಧ್ಯಯನವನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಟ್ಟಿರುವ ಹೆಮ್ಮೆ ಅಂಬಿಕಾ ಸಂಸ್ಥೆಯದ್ದು. ಬಿಎಸ್ಸಿ ಹಾಗೂ ಬಿಎ ವಿಭಾಗಗಳೆರಡರಲ್ಲೂ ಮನಃಶಾಸ್ತ್ರ ವಿಷಯವನ್ನು ಒಂದು ವಿಷಯವನ್ನಾಗಿ ಅಧ್ಯಯನ ನಡೆಸುವ ಅವಕಾಶ ವಿದ್ಯಾರ್ಥಿಗಳಿಗಿದೆ. ಇಂದು ಮನಃಶಾಸ್ತ್ರ ಅಧ್ಯಯನ ನಡೆಸುವವರಿಗೆ ವಿವಿಧ ಆಸ್ಪತ್ರೆ, ಸಮಾಜ ಸೇವಾ ಸಂಸ್ಥೆ, ವಿವಿಧ ಕಂಪೆನಿ, ಬೋಧನಾ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಸ್ವಂತ ಕೌನ್ಸೆಲಿಂಗ್ ಸೆಂಟರ್ ಅನ್ನೂ ಆರಂಭಿಸುವುದಕ್ಕೆ ಸಾಧ್ಯವಿದೆ ಮತ್ತು ಅಂತಹವುಗಳಿಗೆಲ್ಲ ಅಪಾರ ಬೇಡಿಕೆಯೂ ಇದೆ. ಅದರಲ್ಲೂ ಪುತ್ತೂರಿನ ಪರಿಸರದಲ್ಲಿ ಮನಃಶಾಸ್ತ್ರ ಅಧ್ಯಯನ ನಡೆಸಿದವರ ಸಂಖ್ಯೆ ಸಾಕಷ್ಟು ಕಡಿಮೆ ಇದೆ.
ಗುಣಮಟ್ಟದ ಶಿಕ್ಷಣ: ಅಂಬಿಕಾ ವಿದ್ಯಾಸಂಸ್ಥೆ ಹೆಸರಾಗಿರುವುದೇ ಗುಣಮಟ್ಟದ ಶಿಕ್ಷಣಕ್ಕಾಗಿ. ನಾಳಿನ ಸದೃಢ ಸಮಾಜಕ್ಕೆ ನಾವು ನೀಡುವ ಶಿಕ್ಷಣವೇ ಮೂಲಧಾತು ಎಂಬುದು ಇಲ್ಲಿನ ನಂಬಿಕೆ. ಪರಿಣಾಮವಾಗಿ ದೂರದೂರುಗಳಿಂದಲೂ ಅಂಬಿಕಾ ಸಂಸ್ಥೆಯನ್ನು ಹುಡುಕಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಹಾಸ್ಟೆಲ್ ವ್ಯವಸ್ಥೆಯೂ ಇಲ್ಲಿರುವುದು ಅನೇಕರ ಶಿಕ್ಷಣದ ಕನಸಿಗೆ ಪೂರಕವೆನಿಸಿದೆ. ಪ್ರಸ್ತುತ ಪದವಿ ಕಾಲೇಜಿಗೆ ದಾಖಲಾತಿ ಭರದಿಂದ ಸಾಗುತ್ತಿದ್ದು, ಆಸಕ್ತರು ಅಂಬಿಕಾ ಸಂಸ್ಥೆಯಲ್ಲಿ ಓದುವ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದು. ಸಂಪರ್ಕ ಸಂಖ್ಯೆ : 08251 – 295688, 8277602488