Recent Posts

Friday, November 22, 2024
ಹೆಚ್ಚಿನ ಸುದ್ದಿ

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ರವಿಶಂಕರ್ ಹೊರತುಪಡಿಸಿ 12 ಮಂದಿಯ ಮೇಲೆ ಎಫ್ ಐಆ – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್ ವುಡ್ ನಶೆ ನಂಟಿನ ಹಿನ್ನಲೆಯಲ್ಲಿ ನಟಿ ರಾಗಿಣಿ ದ್ವಿವೇದಿ ಬಂಧನದ ಬೆನ್ನಲ್ಲೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ 12 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಟಿ ರಾಗಿಣಿ ದ್ವಿವೇದಿ ಎ-2 ಆರೋಪಿಯಾಗಿದ್ದಾರೆ.

ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಶಿವಪ್ರಕಾಶ್ ಎಂಬಾತನು ಎ1, ರಾಗಿಣಿ ಎ2 ಮತ್ತು ಶುಕ್ರವಾರ ದಿಲ್ಲಿಯಲ್ಲಿ ಬಂಧನಕ್ಕೆ ಒಳಗಾದ ವೀರೇನ್ ಖನ್ನಾ ಎ3 ಆರೋಪಿಯಾಗಿದ್ದಾರೆ. ಅದಲ್ಲದೆ ಸೆನೆಗಲ್ ದೇಶದ ಪ್ರಜೆ ಲೂಮ್ ಪೆಪ್ಪರ್ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರವಿಶಂಕರ್ ಹೆಸರಿಲ್ಲ
ಆದರೆ ರಾಗಿಣಿ ಆಪ್ತ ಆರ್ ಟಿಒ ಅಧಿಕಾರಿ ರವಿಶಂಕರ್ ಹೆಸರನ್ನು ಎಫ್ ಐಆರ್ ನಲ್ಲಿ ಸೇರಿಸಲಾಗಿಲ್ಲ. ಸಿಸಿಬಿ ಪೊಲೀಸರಿಗೆ ರಾಗಿಣಿ, ವೀರೇಶ್ ಖನ್ನಾ ಮುಂತಾದವರ ಹೆಸರು ಹೇಳಿದ್ದು ಈತನೇ ಎನ್ನಲಾಗಿದ್ದು, ಈತನನ್ನು ಅಪ್ರೂವರ್ ಎಂದು ಹೆಸರಿಸಲಾಗಿದೆ ಎಂದು ವರದಿಯಾಗಿದೆ. ಹೀಗಾಗಿಯೇ ರವಿಶಂಕರ್ ಹೆಸರು ಎಫ್ ಐಆರ್ ನಲ್ಲಿಲ್ಲ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡ್ರಗ್ ಮಾಫಿಯಾ ತನಿಖೆ ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ: ಸಚಿವ ಸಿಟಿ ರವಿ

ಆರೋಪಿಗಳು

ಎ1. ಶಿವಪ್ರಕಾಶ್, ಎ2. ರಾಗಿಣಿ ದ್ವಿವೇದಿ, ಎ3. ವಿರೇನ್ ಖನ್ನಾ, ಎ4. ಪ್ರಶಾಂತ್ ರಾಂಕಾ, ಎ5. ವೈಭವ್ ಜೈನ್, ಎ6. ಆದಿತ್ಯ ಆಳ್ವ, ಎ7. ಲೂಮ್ ಪೆಪ್ಪಾರ್, ಎ8. ಸೈಮನ್, ಎ9. ಪ್ರಶಾಂತ್ ಬಾಬು, ಎ10. ಅಶ್ವಿನಿ, ಎ11. ರಾಹುಲ್, ಎ12. ವಿನಯ್